ಸೌದಿ ಅರೇಬಿಯಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಶುಕ್ರವಾರ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ಲಸಿಕೆಯನ್ನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿರುವ ಸೌದಿ ಅರೇಬಿಯಾ ಪ್ರಿನ್ಸ್ ಕಾರ್ಯಕ್ಕೆ ಆರೋಗ್ಯ ಸಚಿವ ಡಾ, ತವ್ಫಿಕ್ ಅಲ್ ರಾಬಿಯಾ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಷನ್ 2030 ಯೋಜನೆಯ ಅಡಿಯಲ್ಲಿ ಕೊರೊನಾ ವಿರುದ್ಧ ಸಮರ ಸಾರಿರುವ ಸೌದಿ ಅರೇಬಿಯಾ ಫೈಜರ್ ಕೊರೊನಾ ಲಸಿಕೆಯನ್ನ ಬಳಕೆ ಮಾಡುತ್ತಿದೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಮುಂಜಾಗ್ರತಾ ಕ್ರಮವೇ ಮುಖ್ಯ ಎಂಬ ಮಾತನ್ನ ಒತ್ತಿ ಒತ್ತಿ ಹೇಳುತ್ತಿರುವ ಸೌದಿ ಅರೇಬಿಯಾ ಫೈಜರ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ. ಈ ತಿಂಗಳ ಆರಂಭದಲ್ಲೇ ಸೌಧಿ ಅರೇಬಿಯಾ ಫೈಜರ್ ಹಾಗೂ ಬಯೊಟೆಕ್ ಕಂಪನಿ ತಯಾರಿಸಿದ ಲಸಿಕೆಯನ್ನ ಸ್ವೀಕಾರ ಮಾಡಿತ್ತು.