ರಿಯಾದ್: ವಿಮಾನವನ್ನೋ ಹೆಲಿಕ್ಯಾಪ್ಟರನ್ನೋ ಏರದೇ ಇನ್ನೇನು ಬಾನನ್ನು ಮುಟ್ಟೇ ಬಿಡುತ್ತೇನೆ ಎಂಬಷ್ಟು ಎತ್ತರಕ್ಕೇರಬೇಕಾ..? ಹಾಗಿದ್ದರೆ ಸೌದಿ ಅರೇಬಿಯಾಕ್ಕೆ ಹೋಗಿ. ವಿಶ್ವದ ಅತಿ ಎತ್ತರದ ಹಾಗೂ ವೇಗದ ರೋಲರ್ ಕೋಸ್ಟರ್ ಸೌದಿ ರಾಜಧಾನಿ ರಿಯಾದ್ನಲ್ಲಿ ಸಿದ್ಧವಾಗುತ್ತಿದೆ.
ಕ್ವಿದ್ದಿಯಾ ಎಂಬ 6 ಧ್ವಜವಿರುವ ರೆಸಾರ್ಟ್ನಲ್ಲಿ ರೋಲರ್ ಕೋಸ್ಟರ್ ಸಿದ್ಧವಾಗುತ್ತಿದ್ದು, ಪ್ರಯಾಣಿಕರನ್ನು ಹೊತ್ತ ಮೋಟರ್ ಒಮ್ಮೆಲೇ 160 ಮೀಟರ್ ಆಳಕ್ಕೆ ಧುಮುಕಲಿದೆ. ಈ ಮ್ಯಾಜಿಕ್ ಮೋಟರ್ಗಾಗಿ 524 ಅಡಿ ಕಣಿವೆಯನ್ನೇ ಸೃಷ್ಟಿ ಮಾಡಲಾಗಿದೆ. ಮೋಟರ್ ಪ್ರತಿ ಗಂಟೆಗೆ 250 ಕಿಮೀ ವೇಗದಲ್ಲಿ ಸಂಚರಿಸಲಿದೆ. ರೋಲರ್ ಕೋಸ್ಟರ್ 2023 ರಲ್ಲಿ ಉದ್ಘಾಟನೆಯಾಗಬಹುದು ಎಂದು ರೆಸಾರ್ಟ್ ಮಾಹಿತಿ ನೀಡಿದೆ.
ಕಾರ್ಡಿ ಬಿ ಪೋಸ್ಟ್ ಕಂಡು ದೇಸೀ ನೆಟ್ಟಿಗರು ಫುಲ್ ಖುಷ್…!
ಮ್ಯಾಗ್ನೇಟಿಕ್ ಮೋಟರ್ ಎಕ್ಸಲರೇಶನ್ ಅಥವಾ ಎಲ್ಎಸ್ಎಂ ತಂತ್ರಜ್ಞಾನ ಬಳಸಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದೆ. ಒಮ್ಮೆಗೆ 20 ಪ್ರಯಾಣಿಕರನ್ನು 3 ನಿಮಿಷ ಸುತ್ತಾಡಿಸಬಹುದಾಗಿದೆ ಎಂದು ರೋಲರ್ ಕೋಸ್ಟರ್ ಸಿದ್ಧಮಾಡುತ್ತಿರುವ ಇಂಟಮಿನ್ ಅಮ್ಯೂಸ್ಮೆಂಟ್ ರೈಡ್ಸ್ ಎಂಬ ಕಂಪನಿಯ ಡಿಸೈನ್ ಮತ್ತು ಡೆವಲಪ್ಮೆಂಟ್ ವಿಭಾಗದ ಉಪಾಧ್ಯಕ್ಷ ಡೇನಿಯಲ್ ಸ್ಕೋಪೆನ್ ತಿಳಿಸಿದ್ದಾರೆ.