alex Certify ಸೌದಿ ಅರೇಬಿಯಾದ ಎರಡು ಐತಿಹಾಸಿಕ ನಿರ್ಧಾರಕ್ಕೆ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌದಿ ಅರೇಬಿಯಾದ ಎರಡು ಐತಿಹಾಸಿಕ ನಿರ್ಧಾರಕ್ಕೆ ಶ್ಲಾಘನೆ

सऊदी अरब ने लिए दो ऐतिहासिक फैसले, दुनिया भर में हो रही तारीफ

ಸೌದಿ ಅರೇಬಿಯಾದ ಎರಡು ಐತಿಹಾಸಿಕ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಬಾಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಚಾವಟಿಯಲ್ಲಿ ಹೊಡೆದು ಹತ್ಯೆ  ಮಾಡುವ ಶಿಕ್ಷೆಯನ್ನು ರದ್ದು ಮಾಡಲಾಗಿದೆ.

ಕಳೆದ ಕೆಲ ವರ್ಷಗಳಿಂದ ಸೌದಿಯ ಅನೇಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ. ಸೌದಿ ಸಾಮ್ರಾಜ್ಯದ ಚಿತ್ರಣವನ್ನು ಬದಲಿಸುವ ಪ್ರಯತ್ನವನ್ನು ಮೊಹಮ್ಮದ್ ಬಿನ್ ಸಲ್ಮಾನ್ ಮಾಡ್ತಿದ್ದಾರೆ.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಪರಾಧಿಗಳಿಗೆ ಗಲ್ಲು ಶಿಕ್ಷೆ ಬದಲು 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಲ್ಲಿ ಸೌದಿ ಅರೇಬಿಯಾ ವಿಶ್ವದಲ್ಲೇ ಮುಂದಿದೆ.

ಭಯೋತ್ಪಾದನೆ, ಅತ್ಯಾಚಾರ, ದರೋಡೆ, ಮಾದಕ ವಸ್ತು ಕಳ್ಳ ಸಾಗಣೆ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸುವ ಅವಕಾಶವಿದೆ. ಅಧಿಕೃತ ಮಾಹಿತಿಯ ಪ್ರಕಾರ 2019 ರಲ್ಲಿ ಸೌದಿ ಅರೇಬಿಯಾ 187 ಜನರಿಗೆ ಮರಣ ದಂಡನೆ ವಿಧಿಸಿದೆ. ಸೌದಿ ಅರೇಬಿಯಾ ಶನಿವಾರ ಚಾವಟಿ ಶಿಕ್ಷೆಯನ್ನು ರದ್ದುಪಡಿಸಿದೆ. ಇದನ್ನು ಅಮಾನವೀಯ ಎಂದು ಕರೆಯುವ ಮೂಲಕ ಅದನ್ನು ಕೊನೆಗೊಳಿಸಲು ವಿಶ್ವದಾದ್ಯಂತ ಅನೇಕ ದೇಶಗಳು ಒತ್ತಾಯಿಸಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...