alex Certify ಸೌದಿ ಮಹಿಳಾ ಪರ ಹೋರಾಟಗಾರ್ತಿಗೆ 6 ವರ್ಷಗಳ ಕಾಲ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌದಿ ಮಹಿಳಾ ಪರ ಹೋರಾಟಗಾರ್ತಿಗೆ 6 ವರ್ಷಗಳ ಕಾಲ ಜೈಲು

ಕಳೆದ ಕೆಲ ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಸೌದಿ ಅರೇಬಿಯಾದ ಮಹಿಳಾ ಪರ ಹೋರಾಟಗಾರ್ತಿ ಲೌಜೈನ್​ ಅಲ್​ ಹಥ್ಲೌಲ್​ಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಲೌಜೆನ್​ ಅಲ್​ ಹಥ್ಲೌಲ್​ ಕಳೆದ ಎರಡೂವರೆ ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದರು. ಬದಲಾವಣೆ ಆಂದೋಲನ, ವಿದೇಶಿ ಕಾರ್ಯಸೂಚಿ ಅನುಸರಿಸುವುದು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರವಂತೆ ಅಂತರ್ಜಾಲ ಬಳಕೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ರಾಜ್ಯ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಅಲ್​ ಹಥ್ಲೌಲ್​​ರನ್ನ ತಪ್ಪಿತಸ್ಥರೆಂದು ವರದಿ ಮಾಡಿದೆ. ಕೋರ್ಟ್​ನ ತೀರ್ಪನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಮಾರ್ಚ್ 2018ರಲ್ಲಿ ಲಾಜೌಲ್​​ರನ್ನ ಯುಎಇನಿಂದ ಅಪಹರಿಸಿ ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಲಾಗಿತ್ತು. ಕೆಲವು ದಿನಗಳ ಕಾಲ ಆಕೆಯನ್ನ ಬಂಧಿಸಿ ಬಳಿಕ ಪ್ರಯಾಣಕ್ಕೆ ನಿಷೇಧ ಹೇರಲಾಗಿತ್ತು . 2018ರ ಜೂನ್​​ನಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಾಹನ ಚಲಾವಣೆಗೆ ಅನುಮತಿ ನೀಡಿತು. ಇದಕ್ಕಾಗಿ ಹೋರಾಡಿದ ಲೌಜೈನ್​ ಮಾತ್ರ ಆಗಲೂ ಜೈಲಿನಲ್ಲೇ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...