ಕಳೆದ ಕೆಲ ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಸೌದಿ ಅರೇಬಿಯಾದ ಮಹಿಳಾ ಪರ ಹೋರಾಟಗಾರ್ತಿ ಲೌಜೈನ್ ಅಲ್ ಹಥ್ಲೌಲ್ಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲೌಜೆನ್ ಅಲ್ ಹಥ್ಲೌಲ್ ಕಳೆದ ಎರಡೂವರೆ ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದರು. ಬದಲಾವಣೆ ಆಂದೋಲನ, ವಿದೇಶಿ ಕಾರ್ಯಸೂಚಿ ಅನುಸರಿಸುವುದು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರವಂತೆ ಅಂತರ್ಜಾಲ ಬಳಕೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ರಾಜ್ಯ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಅಲ್ ಹಥ್ಲೌಲ್ರನ್ನ ತಪ್ಪಿತಸ್ಥರೆಂದು ವರದಿ ಮಾಡಿದೆ. ಕೋರ್ಟ್ನ ತೀರ್ಪನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಮಾರ್ಚ್ 2018ರಲ್ಲಿ ಲಾಜೌಲ್ರನ್ನ ಯುಎಇನಿಂದ ಅಪಹರಿಸಿ ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಲಾಗಿತ್ತು. ಕೆಲವು ದಿನಗಳ ಕಾಲ ಆಕೆಯನ್ನ ಬಂಧಿಸಿ ಬಳಿಕ ಪ್ರಯಾಣಕ್ಕೆ ನಿಷೇಧ ಹೇರಲಾಗಿತ್ತು . 2018ರ ಜೂನ್ನಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಾಹನ ಚಲಾವಣೆಗೆ ಅನುಮತಿ ನೀಡಿತು. ಇದಕ್ಕಾಗಿ ಹೋರಾಡಿದ ಲೌಜೈನ್ ಮಾತ್ರ ಆಗಲೂ ಜೈಲಿನಲ್ಲೇ ಇದ್ದರು.