
ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್ ಮಾಡಿದೆ.
2008ರಲ್ಲಿ ಸ್ಥಾಪನೆಯಾದ ’ಹಾರ್ಲೆ ಸಾಂಟಾ ಕ್ಲಬ್’ ಪ್ರತಿ ವರ್ಷದ ಕ್ರಿಸ್‌ಮಸ್ ವೇಳೆ ಈ ಪರೇಡ್ ನಡೆಸಿಕೊಂಡು ಬರುತ್ತಿದೆ. ಪರೇಡ್ ಆದ ಕೂಡಲೇ ಟಾಯ್ ರನ್ ಮೂಲಕ ಮಕ್ಕಳಿಗೆ ಉಡುಗೊರೆಯಾಗಿ ಆಟಿಕೆಗಳನ್ನು ಕೊಡುತ್ತಾರೆ ಈ ಬೈಕರ್‌ಗಳು.
ಕೊರೋನಾ ವೈರಸ್ ವರ್ಷದಲ್ಲಿ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಆಗುತ್ತಿವೆ ಎನ್ನುತ್ತಾರೆ ಬೈಕರ್‌ಗಳು. “ಕೆಲಸ ಕಳೆದುಕೊಂಡ ಸ್ಟ್ರೆಸ್ ಅನ್ನು ತಮ್ಮ ಮಕ್ಕಳ ಮೇಲೆ ಪೋಷಕರು ಕಾರಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಲಾಕ್‌ಡೌನ್ ಆಗಿರುವ ಕಾರಣದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಹಾಗಾಗಿ ಈ ಪರೇಡ್ ಅನ್ನು ಆಯೋಜನೆ ಮಾಡಿದ್ದೇವೆ” ಎನ್ನುತ್ತಾರೆ ಪರೇಡ್‌ನಲ್ಲಿ ಭಾಗಿಯಾಗಿದ್ದ ಬೈಕರ್ ಟಕಾಶಿ ಮೈನ್.
ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಜಪಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.