ಇಂಗ್ಲೆಂಡ್ನ ಮ್ಯಾಂಚೆಸ್ಟರ್ನ 12 ವರ್ಷದ ಬಾಲಕ ಶಾಲೆಯ ಶೌಚಾಲಯದಲ್ಲಿ ರೇವ್ ಪಾರ್ಟಿಯನ್ನ ಆಯೋಜಿಸುವ ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕಿದ್ದಾನೆ.
ಕೇಲ್ ಬೆಲ್ ಸೇಂಟ್ ಆಂಥೋನಿ ಕ್ಯಾಥೋಲಿಕ್ ಶಾಲೆಯ ವಿದ್ಯಾರ್ಥಿ ತನ್ನ ಸಹಪಾಠಿಗಳಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನು. ಸ್ನಾಪ್ಚಾಟ್ನಲ್ಲಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ.
30 ನಿಮಿಷಗಳ ಕಾಲ ಈ ರೇವ್ ಪಾರ್ಟಿ ಸುಗಮವಾಗಿ ಸಾಗಿದೆ. ಆದರೆ ಬಳಿಕ ಶಾಲಾ ಸಿಬ್ಬಂದಿಗೆ ಈ ಪಾರ್ಟಿಯ ಬಗ್ಗೆ ಮಾಹಿತಿ ರವಾನೆಯಾಗಿದ್ದು, ಶೌಚಾಲಯಕ್ಕೆ ಆಗಮಿಸಿದ ಶಾಲಾ ಸಿಬ್ಬಂದಿ ಎಲ್ಲಾ ಸ್ಪೀಕರ್ ಹಾಗೂ ದೀಪಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸ್ವತಃ ವಿದ್ಯಾರ್ಥಿಯ ತಾಯಿ ಮಗನ ರೇವ್ ಪಾರ್ಟಿಯ ವಿಡಿಯೋಗಳನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಡಿಜೆ ನುಡಿಸುವ ಪ್ರತಿಭೆಗೆ ಭೇಷ್ ಎಂದಿದ್ದಾರೆ.