alex Certify ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಯ್ತು ಬರೋಬ್ಬರಿ 29 ವರ್ಷ ಹಿಂದಿನ ಪ್ಲಾಸ್ಟಿಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಯ್ತು ಬರೋಬ್ಬರಿ 29 ವರ್ಷ ಹಿಂದಿನ ಪ್ಲಾಸ್ಟಿಕ್​..!

ಪ್ಲಾಸ್ಟಿಕ್​ ಭೂಮಿಯಲ್ಲಿ ಕರಗೋದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಸ್ಕಾಟ್​ಲ್ಯಾಂಡ್​ನ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಕ್ಕ ಸ್ಯಾಂಡ್​ವಿಚ್​ ರ್ಯಾಪರ್​ನ್ನು ಕಂಡ ಬಳಿಕ ಈ ಪ್ಲಾಸ್ಟಿಕ್​ಗಳು ಎಷ್ಟು ವರ್ಷ ಕಳೆದರೂ ಭೂಮಿಯಲ್ಲಿ ಹಾಗೇ ಇರಬಲ್ಲವು ಅನ್ನೋದನ್ನ ಸಾಬೀತು ಮಾಡಿದೆ.

ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್​ನಲ್ಲಿ 1992ರ ಕಾಲದ ಸ್ಯಾಂಡ್​ವಿಚ್​​ ಪ್ಲಾಸ್ಟಿಕ್​ನ್ನು ನೀವು ಕಾಣಬಹುದಾಗಿದೆ. ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಈ ಹಳೆಯ ಪ್ಲಾಸ್ಟಿಕ್​ ಪತ್ತೆಯಾಗಿದೆ. ಇದರ ಮೇಲೆ ಸ್ಯಾಂಡ್​ವಿಚ್​ನ ಬೆಲೆ 1.09 ಪೌಂಡ್​ ಎಂದು ಬರೆಯಲಾಗಿದೆ ಹಾಗೂ ಮಾರ್ಚ್ 23, 1992ರಲ್ಲಿ ಇದು ಕೆಡಲಿದೆ ಎಂದೂ ಉಲ್ಲೇಖಿಸಲಾಗಿದೆ.

ಒಂದು ದಿನದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ 3.7 ಲಕ್ಷ ರೂ. ಬಿಲ್….!

ಈ ಚಿತ್ರವನ್ನ ಪೋಸ್ಟ್ ಮಾಡಿರುವ ಮಾರ್​ ಲಾಡ್ಜ್​ ಎಸ್ಟೇಟ್​, ಈ ಪ್ಲಾಸ್ಟಿಕ್​ ನಮಗೆ ಕಲ್ಲಿನ ಅಡಿಯಲ್ಲಿ ಸಿಕ್ಕಿದೆ. 29 ವರ್ಷ ಕಳೆದರೂ ಈ ಪ್ಲಾಸ್ಟಿಕ್​​ ಒಂದು ಚೂರು ಹಾಳಾಗಿಲ್ಲ. ಇದನ್ನ ನೋಡುತ್ತಿದ್ದರೆ ಪ್ಲಾಸ್ಟಿಕ್​ಗಳು ಕರಗದೇ ಭೂಮಿ ಮೇಲೆ ಎಷ್ಟು ದೀರ್ಘ ಸಮಯಗಳ ಕಾಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಪಾರ್ಕ್​ಗೆ ಭೇಟಿ ನೀಡಿದ ನೀವು ಕಸಗಳನ್ನ ಸರಿಯಾಗಿ ವಿಲೇವಾರಿ ಮಾಡಿ ಎಂದು ಪ್ರವಾಸಿಗರಲ್ಲಿ ಮನವಿ ಮಾಡಿದೆ. ಈ ಪೋಸ್ಟ್​ ಫೇಸ್​ಬುಕ್​ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...