ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಯ್ತು ಬರೋಬ್ಬರಿ 29 ವರ್ಷ ಹಿಂದಿನ ಪ್ಲಾಸ್ಟಿಕ್..! 02-05-2021 10:42AM IST / No Comments / Posted In: Latest News, International ಪ್ಲಾಸ್ಟಿಕ್ ಭೂಮಿಯಲ್ಲಿ ಕರಗೋದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಸ್ಕಾಟ್ಲ್ಯಾಂಡ್ನ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಕ್ಕ ಸ್ಯಾಂಡ್ವಿಚ್ ರ್ಯಾಪರ್ನ್ನು ಕಂಡ ಬಳಿಕ ಈ ಪ್ಲಾಸ್ಟಿಕ್ಗಳು ಎಷ್ಟು ವರ್ಷ ಕಳೆದರೂ ಭೂಮಿಯಲ್ಲಿ ಹಾಗೇ ಇರಬಲ್ಲವು ಅನ್ನೋದನ್ನ ಸಾಬೀತು ಮಾಡಿದೆ. ಫೇಸ್ಬುಕ್ನಲ್ಲಿ ಶೇರ್ ಮಾಡಲಾದ ಪೋಸ್ಟ್ನಲ್ಲಿ 1992ರ ಕಾಲದ ಸ್ಯಾಂಡ್ವಿಚ್ ಪ್ಲಾಸ್ಟಿಕ್ನ್ನು ನೀವು ಕಾಣಬಹುದಾಗಿದೆ. ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಈ ಹಳೆಯ ಪ್ಲಾಸ್ಟಿಕ್ ಪತ್ತೆಯಾಗಿದೆ. ಇದರ ಮೇಲೆ ಸ್ಯಾಂಡ್ವಿಚ್ನ ಬೆಲೆ 1.09 ಪೌಂಡ್ ಎಂದು ಬರೆಯಲಾಗಿದೆ ಹಾಗೂ ಮಾರ್ಚ್ 23, 1992ರಲ್ಲಿ ಇದು ಕೆಡಲಿದೆ ಎಂದೂ ಉಲ್ಲೇಖಿಸಲಾಗಿದೆ. ಒಂದು ದಿನದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ 3.7 ಲಕ್ಷ ರೂ. ಬಿಲ್….! ಈ ಚಿತ್ರವನ್ನ ಪೋಸ್ಟ್ ಮಾಡಿರುವ ಮಾರ್ ಲಾಡ್ಜ್ ಎಸ್ಟೇಟ್, ಈ ಪ್ಲಾಸ್ಟಿಕ್ ನಮಗೆ ಕಲ್ಲಿನ ಅಡಿಯಲ್ಲಿ ಸಿಕ್ಕಿದೆ. 29 ವರ್ಷ ಕಳೆದರೂ ಈ ಪ್ಲಾಸ್ಟಿಕ್ ಒಂದು ಚೂರು ಹಾಳಾಗಿಲ್ಲ. ಇದನ್ನ ನೋಡುತ್ತಿದ್ದರೆ ಪ್ಲಾಸ್ಟಿಕ್ಗಳು ಕರಗದೇ ಭೂಮಿ ಮೇಲೆ ಎಷ್ಟು ದೀರ್ಘ ಸಮಯಗಳ ಕಾಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಪಾರ್ಕ್ಗೆ ಭೇಟಿ ನೀಡಿದ ನೀವು ಕಸಗಳನ್ನ ಸರಿಯಾಗಿ ವಿಲೇವಾರಿ ಮಾಡಿ ಎಂದು ಪ್ರವಾಸಿಗರಲ್ಲಿ ಮನವಿ ಮಾಡಿದೆ. ಈ ಪೋಸ್ಟ್ ಫೇಸ್ಬುಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.