ಬ್ರಿಟನ್ನಲ್ಲಿರುವ ಭಾರತೀಯ ಮೂಲದ ರೆಸ್ಟಾರೆಂಟ್ ಒಂದು ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದೆ. ಈ ಸಮೋಸಾ ಹೊತ್ತೊಯ್ದ ಏರ್ ಬಲೂನ್ ಫ್ರಾನ್ಸ್ನಲ್ಲಿ ಲ್ಯಾಂಡ್ ಆಗಿದೆ. ಬ್ರಿಟನ್ನ ಪ್ರತಿಷ್ಟಿತ ರೆಸ್ಟಾರೆಂಟ್ಗಳಲ್ಲೊಂದಾದ ಚಾಯ್ ವಾಲಾ ಮೂರು ಪ್ರಯತ್ನಗಳ ಬಳಿಕ ಈ ಪ್ರಯೋಗವನ್ನ ಮಾಡುವಲ್ಲಿ ಯಶಸ್ವಿಯಾಗಿದೆ.
ಚಾಯ್ವಾಲಾ ರೆಸ್ಟೊರೆಂಟ್ ಮಾಲೀಕರಾದ ನೀರಜ್ ಗಧೇರ್, ನಾನೊಮ್ಮೆ ಸಮೋಸವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದೆ. ಬಳಿಕ ಈ ಪ್ರಯೋಗವನ್ನ ಮಾಡುವ ಮೂಲಕ ನಾನ್ಯಾಕೆ ಎಲ್ಲರನ್ನೂ ನಗಿಸಬಾರದು ಎಂದು ಯೋಚಿಸಿ ಈ ಕೆಲಸ ಮಾಡಿದೆ ಎಂದು ಹೇಳಿದ್ರು.
ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸಲು ನೀರಜ್ ಹೀಲಿಯಂ ತುಂಬಿದ ಬಲೂನುಗಳನ್ನ ಬಳಕೆ ಮಾಡಿದ್ದಾರೆ. ಸಮೋಸಾವನ್ನ ಸರಿಯಾಗಿ ಟೇಕ್ಆಪ್ ಮಾಡಲು ನೀರಜ್ ಮೂರು ಪ್ರಯತ್ನಗಳನ್ನ ಮಾಡಬೇಕಾಯ್ತು. ಮೊದಲ ಪ್ರಯತ್ನದಲ್ಲಿ ಹೀಲಿಯಂ ಬಲೂಮ್ ಅವರ ಕೈ ತಪ್ಪಿ ಹೋಗಿತ್ತು. ಎರಡನೇ ಪ್ರಯತ್ನದ ವೇಳೆ ಹೀಲಿಯಂ ಕೊರತೆ ಉಂಟಾಯ್ತು. ಮೂರನೇ ಪ್ರಯತ್ನದಲ್ಲಿ ಸಮೋಸಾ ಟೇಕಾಫ್ ಆಯ್ತು. ಜಿಪಿಎಸ್ ಟ್ರಾಕರ್ ಬಳಸಿ ಸಮೋಸಾದ ಪ್ರಯಾಣವನ್ನ ಟ್ರ್ಯಾಕ್ ಮಾಡಲಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.