ಭೂಗೋಳದ ಮೇಲಿನ ಅತ್ಯಂತ ಉಷ್ಣಮಯ ಪ್ರದೇಶವೊಂದರ ಮೇಲೆ ಹಿಮ ನೋಡುವುದು ಎಂದರೆ ಎಂತವರಿಗೂ ಪರಮಾಶ್ಚರ್ಯದ ಸಂಗತಿಯೇ. ಆದರೆ ಇದೇನು ಅಸಾಧ್ಯವಾದ ಪ್ರಕ್ರಿಯೆ ಏನಲ್ಲ.
ಉತ್ತರ ಆಫ್ರಿಕಾದ ಅಷ್ಟೂ ಭೂಭಾಗವನ್ನು ಆವರಿಸಿರುವ ಸಹಾರಾ ಮರುಭೂಮಿಯಲ್ಲೀಗ ತಾಪಮಾನ -2 ಡಿಗ್ರಿಯಷ್ಟು ಕೆಳಗೆ ಇಳಿದಿದ್ದು, ಹಿಮದ ಅಲೆಗಳನ್ನು ಎದುರಿಸುತ್ತಿದೆ.
ಸ್ಥಳೀಯ ಛಾಯಾಗ್ರಾಹಕ ಕರೀಂ ಬೌಷೆಟಾ ಈ ಘಟನೆಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅಲ್ಜೀರಿಯಾದ ಐನ್ ಸೆಫ್ರಾ ಎಂಬ ಪಟ್ಟಣದ ತಾಪಮಾನವು -3 ಡಿಗ್ರಿಗೆ ಇಳಿದ ಕಾರಣ ಮರುಭೂಮಿಯ ಮರಳಿನ ಮೇಲಿನ ಹಿಮದ ಹೊದಿಕೆಯ ಚಿತ್ರವನ್ನು ಸೆರೆ ಹಿಡಿದಿರುವ ಕರೀಂ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CKLZmxMnQ9a/?utm_source=ig_web_copy_link
https://www.instagram.com/p/CKLM-JSnhJh/?utm_source=ig_web_copy_link