ಆನ್ಲೈನ್ ಶಾಪರ್ ಗಳನ್ನು ದಂಗುಬಡಿಸುವ ಆಫರ್ ಒಂದರಲ್ಲಿ, ಇರಾಕ್ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು ಮಾಡುತ್ತಿದೆ.
ವಿಶ್ ಸ್ಟೋರ್ ಎಂಬ ಆನ್ಲೈನ್ ಮಾರಾಟಗಾರರು ಈ ಜಾಹೀರಾತನ್ನು ಪ್ರಕಟಿಸಿದ್ದು, “ವಿಶ್ ಮಾರಾಟ ಮಾಡುವ ಅಗ್ಗದ ವಸ್ತುಗಳ ಶಾಪಿಂಗ್ ಅನ್ನು ಎಂಜಾಯ್ ಮಾಡಿ. ಸ್ಟೋರ್ ಬೆಲೆಯ ಮೇಲೆ 60-80% ವಿನಾಯಿತಿಯನ್ನು ಎಂಜಾಯ್ ಮಾಡಿ” ಎಂದು ಜಾಹೀರಾತಿನಲ್ಲಿ ತೋರಲಾಗಿದೆ.
ಈ ಮೂಲಕ ಸದ್ದಾಂ ಹುಸೇನ್ ಮತ್ತೊಮ್ಮೆ ಟ್ರೆಂಡ್ ಆಗುತ್ತಿದ್ದಾರೆ.