alex Certify ಈ ದೇಶದಲ್ಲಿ ಕೊರೊನಾ ಮೊದಲ ಡೋಸ್​ ಪಡೆದ್ರೆ ಸಿಗಲಿದೆ ಮಾಸ್ಕ್​​ನಿಂದ ವಿನಾಯಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ಕೊರೊನಾ ಮೊದಲ ಡೋಸ್​ ಪಡೆದ್ರೆ ಸಿಗಲಿದೆ ಮಾಸ್ಕ್​​ನಿಂದ ವಿನಾಯಿತಿ….!

ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದವರು ಜುಲೈ ತಿಂಗಳಿನಿಂದ ಮಾಸ್ಕ್​ ಧರಿಸುವ ಅವಶ್ಯಕತೆ ಇಲ್ಲ ಎಂದು ಬುಧವಾರ ದಕ್ಷಿಣ ಕೋರಿಯಾ ಘೋಷಣೆ ಮಾಡಿದೆ. ಜನರಲ್ಲಿ ಲಸಿಕೆ ಪಡೆಯಲು ಪ್ರೇರಣೆ ನೀಡುವ ಸಲುವಾಗಿ ದಕ್ಷಿಣ ಕೋರಿಯಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

52 ಮಿಲಿಯನ್ ಜನ ಸಂಖ್ಯೆ ಹೊಂದಿರುವ ದಕ್ಷಿಣ ಕೋರಿಯಾದಲ್ಲಿ 1.9 ಮಿಲಿಯನ್​ ಜನತೆ ಮಾತ್ರ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಸೆಪ್ಟೆಂಬರ್​​​ ತಿಂಗಳಲ್ಲಿ 70 ಪ್ರತಿಶತ ಲಸಿಕೆ ಅಭಿಯಾನವನ್ನ ಪೂರ್ಣಗೊಳಿಸೋದು ದಕ್ಷಿಣ ಕೋರಿಯಾದ ಗುರಿಯಾಗಿದೆ. ಹೀಗಾಗಿ ಜನರಲ್ಲಿ ಕೊರೊನಾ ಲಸಿಕೆಯನ್ನ ಪಡೆಯುವ ವೇಗ ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ದಕ್ಷಿಣ ಕೋರಿಯಾ ಸರ್ಕಾರ ಈ ಘೋಷಣೆಯನ್ನ ಹೊರಡಿಸಿದೆ ಎಂದು ಪ್ರಧಾನಿ ಕಿಮ್​ ಬೂ ಕ್ಯೂಮ್​ ಹೇಳಿದ್ದಾರೆ.

ಜುಲೈ ತಿಂಗಳ ಆರಂಭದಿಂದ ಕೊರೊನಾ ಲಸಿಕೆ ಮೊದಲ ಡೋಸ್​ ಪಡೆದವರು ಮಾಸ್ಕ್​ ಇಲ್ಲದೇ ಓಡಾಡಬಹುದಾಗಿದೆ. ಇದು ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳ ನಿರ್ಬಂಧ ಹಾಗೂ ಜನಮಿತಿಯಿಂದಲೂ ಇವರಿಗೆ ವಿನಾಯ್ತಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...