alex Certify ಈ ಊರಲ್ಲಿ ಹಸುಗಳಿಗೂ ತೊಡಿಸ್ತಾರೆ ಬ್ರಾ..! ಕಾರಣ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಲ್ಲಿ ಹಸುಗಳಿಗೂ ತೊಡಿಸ್ತಾರೆ ಬ್ರಾ..! ಕಾರಣ ಏನು ಗೊತ್ತಾ…?

ಡಿಸೆಂಬರ್​ ತಿಂಗಳು ಅಂದರೆ ವಿಶ್ವದ ಬಹುತೇಕ ಭಾಗಗಳಲ್ಲಿ ಮೈಕೊರೆಯುವಷ್ಟು ಚಳಿ ಇದ್ದೇ ಇರುತ್ತೆ. ಅದರಲ್ಲೂ ವರ್ಷಪೂರ್ತಿ ಚಳಿಯ ವಾತಾವರಣವನ್ನೇ ಹೊಂದಿರುವ ಸ್ಥಳಗಳಲ್ಲೀಗ ಸಿಕ್ಕಾಪಟ್ಟೆ ಚಳಿ ಇರುತ್ತೆ.

ರಷ್ಯಾದಲ್ಲಿ ಕೂಡ ಡಿಸೆಂಬರ್ ತಿಂಗಳಲ್ಲಿ ಕಡಿಮೆ ತಾಪಮಾನ ವರದಿಯಾಗುತ್ತೆ. ಆದರೆ ಈ ಮೈಕೊರೆಯುವ ಚಳಿಯಿಂದ ತಾನು ಸಾಕಿದ ಹಸುಗಳಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಬೇಕೆಂದು ನಿರ್ಧರಿಸಿದ ರಷ್ಯಾದ ರೈತನೊಬ್ಬ ತನ್ನ ಹಸುಗಳಿಗೆ ಬ್ರಾಗಳನ್ನ ಹಾಕಿಸಿದ್ದಾನೆ.

ಯಾಕುಟಿಯಾದ ಒಮೈಕಾನ್​ ಎಂಬ ಹಳ್ಳಿಯಲ್ಲಿ ಮೈನಸ್​ 45 ಡಿಗ್ರಿಯಷ್ಟು ತಾಪಮಾನ ದಾಖಲಾಗುತ್ತೆ. ಈ ರೀತಿ ತಾಪಮಾನದಿಂದ ಹಸುಗಳಿಗೆ ಸಮಸ್ಯೆಯಾಗಬಾರದು ಅಂತಾ ತಾನೇ ಕೈಯಾರೆ ಹೊಲಿದು ತನ್ನ 5 ಹಸುಗಳಿಗೆ ರೈತ ಬ್ರಾ ತೊಡಿಸಿದ್ದಾನೆ.

ಈ ಬ್ರಾಗಳನ್ನ ದೇಹದ ಸುತ್ತ ಎರಡು ಪಟ್ಟಿ ಹಾಗೂ ಬಾಲದ ಕೆಳಗೆ ಒಂದು ಪಟ್ಟಿಯ ಸಹಾಯದಿಂದ ಕಟ್ಟಲಾಗಿದೆ. ಈ ರೀತಿ ಹಸುಗಳಿಗೆ ಬ್ರಾ ಹಾಕುವ ಮುಖ್ಯ ಉದ್ದೇಶ ಕೆಚ್ಚಲಿನ ಕೋಮಲ ಚರ್ಮಕ್ಕೆ ಚಳಿಯಿಂದ ರಕ್ಷಣೆ ನೀಡುವುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...