ಡಿಸೆಂಬರ್ ತಿಂಗಳು ಅಂದರೆ ವಿಶ್ವದ ಬಹುತೇಕ ಭಾಗಗಳಲ್ಲಿ ಮೈಕೊರೆಯುವಷ್ಟು ಚಳಿ ಇದ್ದೇ ಇರುತ್ತೆ. ಅದರಲ್ಲೂ ವರ್ಷಪೂರ್ತಿ ಚಳಿಯ ವಾತಾವರಣವನ್ನೇ ಹೊಂದಿರುವ ಸ್ಥಳಗಳಲ್ಲೀಗ ಸಿಕ್ಕಾಪಟ್ಟೆ ಚಳಿ ಇರುತ್ತೆ.
ರಷ್ಯಾದಲ್ಲಿ ಕೂಡ ಡಿಸೆಂಬರ್ ತಿಂಗಳಲ್ಲಿ ಕಡಿಮೆ ತಾಪಮಾನ ವರದಿಯಾಗುತ್ತೆ. ಆದರೆ ಈ ಮೈಕೊರೆಯುವ ಚಳಿಯಿಂದ ತಾನು ಸಾಕಿದ ಹಸುಗಳಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಬೇಕೆಂದು ನಿರ್ಧರಿಸಿದ ರಷ್ಯಾದ ರೈತನೊಬ್ಬ ತನ್ನ ಹಸುಗಳಿಗೆ ಬ್ರಾಗಳನ್ನ ಹಾಕಿಸಿದ್ದಾನೆ.
ಯಾಕುಟಿಯಾದ ಒಮೈಕಾನ್ ಎಂಬ ಹಳ್ಳಿಯಲ್ಲಿ ಮೈನಸ್ 45 ಡಿಗ್ರಿಯಷ್ಟು ತಾಪಮಾನ ದಾಖಲಾಗುತ್ತೆ. ಈ ರೀತಿ ತಾಪಮಾನದಿಂದ ಹಸುಗಳಿಗೆ ಸಮಸ್ಯೆಯಾಗಬಾರದು ಅಂತಾ ತಾನೇ ಕೈಯಾರೆ ಹೊಲಿದು ತನ್ನ 5 ಹಸುಗಳಿಗೆ ರೈತ ಬ್ರಾ ತೊಡಿಸಿದ್ದಾನೆ.
ಈ ಬ್ರಾಗಳನ್ನ ದೇಹದ ಸುತ್ತ ಎರಡು ಪಟ್ಟಿ ಹಾಗೂ ಬಾಲದ ಕೆಳಗೆ ಒಂದು ಪಟ್ಟಿಯ ಸಹಾಯದಿಂದ ಕಟ್ಟಲಾಗಿದೆ. ಈ ರೀತಿ ಹಸುಗಳಿಗೆ ಬ್ರಾ ಹಾಕುವ ಮುಖ್ಯ ಉದ್ದೇಶ ಕೆಚ್ಚಲಿನ ಕೋಮಲ ಚರ್ಮಕ್ಕೆ ಚಳಿಯಿಂದ ರಕ್ಷಣೆ ನೀಡುವುದಾಗಿದೆ.