alex Certify BIG NEWS: ಡಿಸೆಂಬರ್​​ 5ರಿಂದ ರಷ್ಯಾದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಸೆಂಬರ್​​ 5ರಿಂದ ರಷ್ಯಾದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಬಳಕೆ

ಕೊರೊನಾ ವೈರಸ್​ ವಿರುದ್ಧ ಸ್ಪುಟ್ನಿಕ್​ ಲಸಿಕೆ ಬಳಕೆಗೆ ರಷ್ಯಾ ಅಧ್ಯಕ್ಷ ಪುಟಿನ್​ ಕರೆ ನೀಡಿದ ಒಂದು ದಿನದ ಬಳಿಕ ಮಾಸ್ಕೋದ ಮೇಯರ್​​ ಡಿಸೆಂಬರ್​ 5ರಿಂದ ಲಸಿಕೆ ಬಳಕೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಲಸಿಕೆ ಬಳಕೆ ವಿಚಾರವಾಗಿ ಮಾತನಾಡಿದ ಮಾಸ್ಕೋದ ಮೇಯರ್​ ಸೆರ್ಗೆಯ್​ ಸೊಬಯಾನಿನ್​ ಶಿಕ್ಷಕರು, ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸ್ಪುಟ್ನಿಕ್​ ವಿ ಲಸಿಕೆ ಮೊದಲು ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಈ ವರ್ಷದ ಅಂತ್ಯದಲ್ಲಿ 2 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣ ಲಸಿಕೆಗಳನ್ನ ಉತ್ಪಾದನೆ ಮಾಡಬಹುದು ಎಂದು ತಯಾರಕರು ಹೇಳಿದ್ದರಿಂದ 2021ರ ಜನವರಿಯಿಂದ ಸಾಮೂಹಿಕ ಲಸಿಕೆ ಬಳಕೆ ಆರಂಭಿಸೋದಾಗಿ ರಷ್ಯಾದ ಅಧಿಕಾರಿಗಳು ಹೇಳಿದ್ದರು.

ಆದರೆ ಮುಂದಿನ ವಾರದಿಂದ ಲಸಿಕೆ ಬಳಕೆಗೆ ಬ್ರಿಟನ್​ ಸರ್ಕಾರ ಅನುಮೋದನೆ ನೀಡಿದ ಕೆಲವೇ ಗಂಟೆಗಳ ಬಳಿಕ ಪುಟಿನ್​ ಈ ಪ್ರಕಟಣೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...