alex Certify ಕೊರೋನಾ ತಡೆ ಪ್ರಯೋಗ ಭರ್ಜರಿ ಸಕ್ಸಸ್: ಮುಂದಿನ ತಿಂಗಳೇ ವಿಶ್ವದ ಮೊದಲ ಕೋವಿಡ್ ಲಸಿಕೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆ ಪ್ರಯೋಗ ಭರ್ಜರಿ ಸಕ್ಸಸ್: ಮುಂದಿನ ತಿಂಗಳೇ ವಿಶ್ವದ ಮೊದಲ ಕೋವಿಡ್ ಲಸಿಕೆ ರಿಲೀಸ್

ಮಾಸ್ಕೋ: ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕರು ಆಗಸ್ಟ್ ಮಧ್ಯದ ವೇಳೆಗೆ ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆ ಮಾಡಲು ಯೋಜಿಸಿದ್ದಾರೆ.

ಪ್ರಯೋಗಗಳ ಫಲಿತಾಂಶಗಳಲ್ಲಿ ಲಸಿಕೆ ಸುರಕ್ಷಿತವೆಂದು ಕಂಡುಬಂದಿದೆ. ಸ್ವಯಂಸೇವಕರ ಮೇಲಿನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿದ್ದು ಅಧ್ಯಯನದ ಮಾಹಿತಿಯ ಪ್ರಕಾರ ಲಸಿಕೆ ಪರಿಣಾಮಕಾರಿಯಾಗಿದೆ. ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯದ ಸರ್ಕಾರಿ ಗಮಾಲೆ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ COVID-19 ಲಸಿಕೆ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಹೇಳಿದೆ.

ಸಂಶೋಧನೆ ಪೂರ್ಣಗೊಂಡಿದ್ದು ಲಸಿಕೆ ಸುರಕ್ಷಿತವಾಗಿದೆ ಎಂಬುದು ಸಾಬೀತಾಗಿರುವುದಾಗಿ ಸೆಚೆನೋವ್ ಯೂನಿವರ್ಸಿಟಿ ಸೆಂಟರ್ ಫಾರ್ ಕ್ಲಿನಿಕಲ್ ರಿಸರ್ಚ್ ಆನ್ ಮೆಡಿಸನ್ಸ್‌ನ ಮುಖ್ಯಸ್ಥರು ಮತ್ತು ಮುಖ್ಯ ಸಂಶೋಧಕಿ ಎಲೆನಾ ಸ್ಮೋಲ್ಯಾರ್ಚುಕ್ ತಿಳಿಸಿದ್ದಾರೆ.

ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 12 ರಿಂದ 14 ರೊಳಗೆ ನಾಗರೀಕರ ಬಳಕೆಗೆ ಔಷಧ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ವೇಳೆಗೆ ಖಾಸಗಿ ಕಂಪನಿಗಳು ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯನ್ನು ಆರಂಭಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾಸ್ಕೋ ಟೈಮ್ಸ್ ವರದಿ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲು ಲಸಿಕೆ ಮೂರು ಹಂತದ ಅಧ್ಯಯನಗಳ ಮೂಲಕ ಸುರಕ್ಷಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ನೀಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...