2011ರಲ್ಲಿ ಕಳುವಾಗಿದ್ದ 1ನೇ ಶತಮಾನದ ರೋಮನ್ ಪ್ರತಿಷ್ಟಿತ ರೋಮನ್ ಪ್ರತಿಮೆಯನ್ನ ವಾಪಸ್ ಪಡೆಯುವಲ್ಲಿ ಇಟಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಲ್ಜಿಯಂನ ಪ್ರಾಚೀನ ವಸ್ತುಗಳ ಅಂಗಡಿಯಲ್ಲಿ ಈ ಪ್ರತಿಮೆಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಟೊಗಾಟಸ್ ಪ್ರತಿಮೆಯು ಬರೋಬ್ಬರಿ 8967984.74 ರೂಪಾಯಿ ಮೌಲ್ಯವನ್ನ ಹೊಂದಿದೆ. ಈ ಪ್ರತಿಮೆಯನ್ನ 2011ರ ನವೆಂಬರ್ ತಿಂಗಳಲ್ಲಿ ರಾಜಧಾನಿ ಹೊರವಲಯದ ವಿಲ್ಲಾ ಮರಿನಿ ಡೆಟ್ಟಿನಾ ಪುರಾತತ್ವ ಸ್ಥಳದಿಂದ ಕಳವು ಮಾಡಲಾಗಿತ್ತು.
ಆರ್ಟ್ ಸ್ಕ್ವಾಡ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ಈ ಪ್ರತಿಮೆ ಇಟಲಿಗೆ ಸೇರಿದ್ದು ಎಂದು ಶಂಕಿಸಿದ್ದಾರೆ. ಇದಾದ ಬಳಿಕ ನಡೆಸಿದ ತನಿಖೆಯಲ್ಲಿ ಇದು ಕಳುವಾದ ಪ್ರತಿಮೆ ಎಂಬ ವಿಚಾರ ಬೆಳಕಿಗೆ ಬಂದಿದೆ.