ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪರಿಸರ ತಜ್ಞ ಸ್ಟೀವ್ ಇರ್ವಿನ್ ಅವರ ಪುತ್ರ ರಾಬರ್ಟ್ ಇರ್ವಿನ್ ತನ್ನ 16ನೇ ವಯಸ್ಸಿಗೇ ಮೃಗಾಲಯವೊಂದರ ಪ್ರಾಣಿಗಳ ಯೋಗಕ್ಷೇಮ ನೋಡಿಕೊಂಡು ಇದ್ದಾನೆ.
ತನ್ನ ಅಜ್ಜ-ಅಜ್ಜಿಯರು 1970ರ ದಶಕದಲ್ಲಿ ಕೋಲಾಗಳು ಹಾಗೂ ಇತರ ಪ್ರಾಣಿಗಳ ಆರೈಕೆಗೆಂದೇ ತೆರೆದ ಮೃಗಾಲಯದ ಹೊಣೆ ಹೊತ್ತಿರುವ ರಾಬರ್ಟ್ ಥೇಟ್ ತನ್ನ ತಂದೆಯಂಥದ್ದೇ ಉಡುಪಿನಲ್ಲಿ ಪ್ರಾಣಿಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದಾನೆ.
ಇತ್ತೀಚೆಗೆ, ಬ್ಯಾಗೊಂದರಿಂದ ಹಾವನ್ನು ಹೊರಗೆಳೆಯುವ ವೇಳೆ ಅದು ತನ್ನ ಮುಖಕ್ಕೆ ಕಚ್ಚಿದ ವಿಡಿಯೋವನ್ನು ರಾಬರ್ಟ್ ಹಂಚಿಕೊಂಡಿದ್ದು, ಬಹಳ ದಿನಗಳ ಹಿಂದೆ ಖುದ್ದು ತನ್ನ ತಂದೆಗೂ ಇದೇ ಕಾರ್ಪೆಟ್ ಪೈತಾನ್ ಎಂಬ ಹಾವು ಕಚ್ಚಿದ್ದಾಗಿ ತಿಳಿಸಿದ್ದಾನೆ. ಅದೃಷ್ಟವಶಾತ್ ಈ ಹಾವು ವಿಷಪೂರಿತವಲ್ಲ.
https://www.instagram.com/p/CCdhgh6j7Rr/?utm_source=ig_embed