
ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್ ಸಂತಸ ಹೇಳಿಕೊಳ್ಳುವುದು ಅಸಾಧ್ಯ.
ಪ್ರಣಯ ಪಕ್ಷಿಗಳಾದ ಜೆಸ್ ಹಾಗೂ ಎರಿನ್ ಆಸ್ಟ್ರೇಲಿಯಾದ ಮೃಗಾಲಯವೊಂದಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ತನ್ನ ಮನದನ್ನೆ ಬಳಿ ಪ್ರೇಮನಿವೇದನೆ ಮಾಡಿಕೊಳ್ಳಲು ಮುಂದಾದ ಯುವಕನಿಗೆ ಅಲ್ಲಿದ್ದ ಕೊಕಟೂ ಪಕ್ಷಿ ಪ್ರೇಮದೈವನಾಗಿ ಹರಸಿದೆ.
ತನ್ನ ಮನದಾಳದ ಆ ಮಾತನ್ನು ಪತ್ರದಲ್ಲಿ ಬರೆದಿದ್ದ ಯುವಕ, ಮೃಗಾಲಯದ ಸಿಬ್ಬಂದಿಯ ನೆರವಿನಿಂದ ಯೂಲಿ ಹೆಸರಿನ ಈ ಕುಕಟೂ ಪಕ್ಷಿಯ ಮೂಲಕ ತನ್ನ ಪಕ್ಕದಲ್ಲೇ ಕುಳಿತಿದ್ದ ಮನದನ್ನೆಗೆ ಕಳುಹಿಸಿದ್ದಾನೆ. ಅನಿರೀಕ್ಷಿತವಾಗಿ ಬಂದ ಈ ಪ್ರಪೋಸಲ್ ಅನ್ನು ನೋಡಿ ಚಕಿತಳಾದ ಆತನ ಪ್ರೇಯಸಿ, ’ಎಸ್’ ಎಂದಿದ್ದು, ಪ್ರಹಸನ ಸುಖಾಂತ್ಯದಲ್ಲಿ ಅಂತ್ಯಗೊಂಡಿದೆ.
https://twitter.com/AustraliaZoo/status/1345473556503662592?ref_src=twsrc%5Etfw%7Ctwcamp%5Etweetembed%7Ctwterm%5E1345473556503662592%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fred-tailed-cockatoo-turns-cupid-helps-australian-man-propose-to-girlfriend-3245762.html