alex Certify 102 ವರ್ಷಗಳ ಹಿಂದೆಯೂ ಹೇಳಲಾಗಿತ್ತು ʼಮಾಸ್ಕ್ʼ‌ ಮಹತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

102 ವರ್ಷಗಳ ಹಿಂದೆಯೂ ಹೇಳಲಾಗಿತ್ತು ʼಮಾಸ್ಕ್ʼ‌ ಮಹತ್ವ

ಮಾಸ್ಕ್ ಧರಿಸಿ, ನಿಮ್ಮ ಜೀವ ಉಳಿಸಿಕೊಳ್ಳಿ. ವೈದ್ಯರು, ಶುಶ್ರೂಷಕರು ನಿಮ್ಮ ಕಾಳಜಿ ವಹಿಸಲು ಸಾಧ್ಯವಿಲ್ಲ.

ಇದು 102 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐ ಸಿ ಆರ್ ಸಿ) ನೀಡಿದ್ದ ಮಾರ್ಗಸೂಚಿ.

ಹೌದು, 1918 ರ ಸಂದರ್ಭದಲ್ಲಿ ಸ್ಪ್ಯಾನಿಷ್ ಫ್ಲ್ಯು ಬಂದಾಗ ಕೂಡ ಈಗಿರುವ ದುಸ್ಥಿತಿಯೇ ಇತ್ತು. ಫ್ಲ್ಯು ಹರಡಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದರು. ಆಗ ಮಾಸ್ಕ್ ಧರಿಸಿ, ವೈದ್ಯರು-ಶುಶ್ರೂಷಕರು ನಿಮ್ಮ ಕಾಳಜಿ ವಹಿಸಲಾಗದು ಎಂದು ನಾಗರಿಕರಿಗೆ ರೆಡ್ ಕ್ರಾಸ್ ಸ್ಪಷ್ಟಪಡಿಸಿತ್ತು. ಮಾಸ್ಕ್ ಧರಿಸದೆ ರೋಗ ತಂದುಕೊಂಡರೆ ಯಾರೂ ಹೊಣೆ ಹೊರಲು ಸಾಧ್ಯವಿಲ್ಲ ಎಂಬ ಸತ್ಯಾಂಶವನ್ನು ಜನರಿಗೆ ಸ್ಪಷ್ಟಪಡಿಸಿತ್ತು.

ಮಾಸ್ಕ್ ಧರಿಸಬೇಕು. ನಿಮ್ಮ ರಕ್ಷಣೆಗಾಗಿ ಮಾತ್ರವಲ್ಲ, ಇನ್ ಫ್ಲ್ಯುಯನ್ಜಾ, ನ್ಯುಮೋನಿಯಾ, ಸಾವಿನಿಂದ ನಿಮ್ಮ ಮನೆಯಲ್ಲಿರುವ ಮಕ್ಕಳು, ಹಿರಿಯ ನಾಗರಿಕರು, ನೆರೆ-ಹೊರೆಯವರು ರಕ್ಷಣೆ ಆಗಬೇಕೆಂದಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಮಾತುಗಳನ್ನು 1918 ರಲ್ಲಿ ಹೇಳಿದ್ದೆವು, ಈಗಲೂ ಇದೇ ಮಾತು ಹೇಳುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...