ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ವಿರುದ್ಧ ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಅಮೆರಿಕ ಬಳಿಕ ಇದೀಗ ಯುಕೆಯಲ್ಲಿಯೂ ಮಾಸ್ಕ್ ವಿರುದ್ಧ ಹೋರಾಟ ಜೋರಾಗಿದೆ. ಕೆಲ ದಿನಗಳ ಹಿಂದೆ ಸಾವಿರಾರು ಮಂದಿ ಲಂಡನ್ ನಲ್ಲಿ ಸೇರಿ, ಪ್ರತಿಭಟನೆ ಮಾಡಿದ್ದಾರೆ.
ಮಾಸ್ಕ್ ಧಾರಣೆಯಿಂದ ಉಸಿರಾಟದ ತೊಂದರೆಯಾಗುತ್ತದೆ. ಇದರೊಂದಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಮೂಲಭೂತ ಹಕ್ಕಿಗೆ ವಿರುದ್ಧ ಎಂದು ವಾದಿಸಿದ್ದಾರೆ. ಇನ್ನು ಕೆಲವರು ಸಾಯುವವರು ಸಾಯುತ್ತಾರೆ. ಈ ಬಗ್ಗೆ ಯಾಕೆ ಚಿಂತಿಸುತ್ತಾರೆ ಎಂದು ಟೀಕಿಸಿದ್ದಾರೆ.