ದಕ್ಷಿಣ ಕ್ಯಾರೋಲಿನಾ ಸಮುದ್ರದಲ್ಲಿ ಅಪರೂಪದ ಬಿಳಿ ಆಮೆ ಮರಿಯೊಂದು ಪತ್ತೆಯಾಗಿದೆ. ಟೌನ್ ಆಫ್ ಕಿವಾಯಾ ದ್ವೀಪ ಫೇಸ್ಬುಕ್ ಖಾತೆಯಲ್ಲಿ ಈ ಅಪರೂಪದ ಆಮೆಯ ಫೋಟೋವನ್ನ ಶೇರ್ ಮಾಡಲಾಗಿದೆ.
ಲ್ಯೂಸಿಯಮ್ ಎಂಬ ಅನುವಂಶಿಕ ಕಾರಣದಿಂದಾಗಿ ಆಮೆ ಈ ಬಣ್ಣವನ್ನ ಪಡೆದಿದೆ. ಲ್ಯೂಸಿಯಂನಿಂದ ಚರ್ಮಕ್ಕೆ ಬರಬೇಕಾದ ಬಣ್ಣ ಮಂದವಾಗುತ್ತೆ. ಇದೇ ಕಾರಣದಿಂದ ಈ ಆಮೆ ಬಿಳಿಯ ಬಣ್ಣಕ್ಕೆ ತಿರುಗಿದೆ ಅಂತಾ ಹೇಳಲಾಗ್ತಿದೆ. ಫೇಸ್ಬುಕ್ನಲ್ಲಿ ಈ ಫೋಟೋ ನೋಡಿದ ನೆಟ್ಟಿಗರು ಇಂತಹ ಆಮೆಯನ್ನ ನಾವೆಂದು ನೋಡೇ ಇರಲಿಲ್ಲ ಅಂತಾ ಆಶ್ಚರ್ಯ ಹೊರಹಾಕಿದ್ದಾರೆ.
https://www.facebook.com/townofkiawahisland/posts/1729625273878404