1930ರಿಂದ ಜನರನ್ನ ರಂಜಿಸುತ್ತಾ ಬಂದಿರುವ ಪ್ರಖ್ಯಾತ ಬೆಲ್ಜಿಯಂ ಕಾರ್ಟೂನಿಸ್ಟ್ ಹರ್ಜ್ರ ಕಾಮಿಕ್ ಇದೀಗ ಮತ್ತೊಂದು ಸಾಧನೆ ಮಾಡುವತ್ತ ದಾಪುಗಾಲನ್ನ ಇರಿಸಿದೆ.
2014ರಲ್ಲಿ ಈ ಕಾಮಿಕ್ ಬುಕ್ ವಿಶ್ವ ದಾಖಲೆಯನ್ನ ನಿರ್ಮಾಣ ಮಾಡಿತ್ತು. 1937 ರಿಂದ 1958ರವರೆಗೆ ಪ್ರಕಟವಾದ ಟಿಂಟಿನ್ ಸಂಪುಟಗಳ ಎರಡು ಪುಟಗಳ ರೇಖಾ ಚಿತ್ರವು 2.65 ಮಿಲಿಯನ್ ಯುರೋಗಳಿಗೆ ಮಾರಾಟವಾಯಿತು.
ಟಿಂಟಿನ್ 5ನೇ ಸರಣಿಯು ಹರ್ಜ್ ಪಾತ್ರದ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಇದು 2.2 ರಿಂದ 2.8 ಮಿಲಿಯನ್ ಯುರೋಗಳಿಗೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.
2.16ರಲ್ಲಿ ಟಿಂಟಿನ್ ಎಕ್ಸ್ ಫ್ಲೋರಸ್ ಆನ್ ದಿ ಮೂನ್ ಪುಸ್ತಕದ ಮೂಲ ಚಿತ್ರವು 1.55 ಮಿಲಿಯನ್ ಯುರೋಗಳಿಗೆ ಮಾರಾಟವಾಯಿತು. 34 ಸೆಂಮೀ.ಚದರ(13ಇಂಚು)ಅಳತೆಯ ಸಣ್ಣ ವರ್ಣಚಿತ್ರವನ್ನು ಗುರುವಾರ ನೀಡಲಾಗುತ್ತಿದ್ದು, ಚೀನಾದ ಡ್ರ್ಯಾಗನ್‌ನ ಭೀಕರ ಚಿತ್ರಣದ ಮುಂದೆ ಪಿಂಗಾಣಿ ಜಾರ್‌ನಿಂದ ಟಿಂಟಿನ್ ಮತ್ತು ಅವನ ನಾಯಿ ಸ್ನೋಯಿ ಹೊರಹೊಮ್ಮಿದ್ದಾರೆ.