ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್ ಒಂದು ಜಪಾನ್ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ.
ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ ಕೊಲ್ಲಿಯಲ್ಲಿ ಮೀನುಗಾರ ಹಿಡಿದಿದ್ದಾರೆ.
ಮೀನುಗಾರನ ಸಾಕಷ್ಟು ಪ್ರಯತ್ನದ ಬಳಿಕವೂ ಈ ಆಕ್ಟೋಪಸ್ ಬದುಕುಳಿಯಲಿಲ್ಲ.
ಇದೀಗ ಈ ಆಕ್ಟೋಪಸ್ನ್ನ ಶಿಜುಗಾವಾ ಪ್ರಕೃತಿ ಕೇಂದ್ರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.
ಆಕ್ಟೋಪಸ್ ಗೆ ತುಂಡಾದ ಕಾಲುಗಳನ್ನ ಪುನರುತ್ಪಾದನೆ ಮಾಡುವ ಸಾಮರ್ಥ್ಯ ಇದೆ. ಹೀಗಾಗಿ ಈ ಬೆಳವಣಿಗೆ ವೇಳೆ ಆಕ್ಟೋಪಸ್ಗೆ ಒಂದು ಕಾಲು ಹೆಚ್ಚುವರಿಯಾಗಿ ಬೆಳೆದಿರಬಹುದು ಎಂದು ಅಂದಾಜಿಸಲಾಗಿದೆ.