ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ.
ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ ಒಂದಾದ ’ಕಾರ್ಪ್ಸ್ ಫ್ಲವರ್’ ಒಂದು ಈ ಮೃಗಾಲಯದಲ್ಲಿ ಅರಳಿದೆ. ಪೂರ್ಣವಾಗಿ ಅರಳಿದ ಮೇಲೆ ಈ ಹೂವು ಕೊಳೆತ ಮಾಂಸದ ವಾಸನೆ ಬರುವ ಕಾರಣ ಈ ಹೆಸರು ಬಂದಿದೆ ಎನ್ನಲಾಗಿದೆ.
ಹತ್ತು ಅಡಿವರೆಗೂ ಬೆಳೆಯಬಲ್ಲ ಈ ಹೂವು 8-10 ವರ್ಷಕ್ಕೊಮ್ಮೆ ಅರಳುತ್ತದೆ. ಸುಮಾತ್ರಾದಲ್ಲಿ ಕಂಡುಬರುವ ಈ ಹೂವನ್ನು ಇಲ್ಲಿನ ವಾಂಡರ್ಬಿಲ್ಟ್ ವಿವಿ ತನ್ನ ಗ್ರೀನ್ಹೌಸ್ ಅನ್ನು ಮುಚ್ಚಿದಾಗ ನ್ಯಾಶ್ವಿಲ್ಲೆ ಮೃಗಾಲಯಕ್ಕೆ ಕೊಟ್ಟಿತ್ತು.
ಪೂರ್ಣವಾಗಿ ಅರಳಿದಾಗ ಈ ಹೂವಿನ ತೂಕವು 30-40 ಕೆಜಿಗಳಷ್ಟಿರುತ್ತವೆ.
https://www.facebook.com/nashvillezoo/videos/639445180072808