ಭಾರತೀಯ ಮೂಲದ ಯುಟ್ಯೂಬರ್ ಕಾರ್ಲ್ ರಾಕ್ ಪ್ರಸ್ತುತ ಪಾಕಿಸ್ತಾನದ ವಿವಿಧ ಪ್ರದೇಶಗಳಿಗೆ ಭೇಟಿ ನೀಡ್ತಾ ಇದ್ದಾರೆ. ಕಾರ್ಲ್ ಪೋಸ್ಟ್ ಮಾಡಿದ ಇತ್ತೀಚಿನ ವಿಡಿಯೋ ಒಂದರಲ್ಲಿ ಪಾಕಿಸ್ತಾನದ 11 ವರ್ಷದ ಹುಡುಗ ಭಾರತದ ಬಗ್ಗೆ ತನ್ನ ಅಭಿಪ್ರಾಯವನ್ನ ವ್ಯಕ್ತಪಡಿಸಿದ ರೀತಿ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಪಾಕಿಸ್ತಾನದಿಂದ ಮತ್ತೊಂದು ವಿಡಿಯೋವನ್ನ ಕಾರ್ಲ್ ರಾಕ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಾರ್ಲ್ ರಾಕ್ ಪಾಕಿಸ್ತಾನದಲ್ಲಿ ರಾಮ ಕುಂದ್ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದ ಧರ್ಮಶಾಲಾದಲ್ಲಿ ಈ ಹಿಂದೂ ದೇವಾಲಯವಿದೆ.
ದೇಶದಲ್ಲಿ ʼಕೊರೊನಾʼ ಏರಿಕೆಯಾಗಿದ್ದರ ಹಿಂದಿನ ಕಾರಣ ಬಹಿರಂಗ
ನಮಸ್ತೆ , ಸಲಾಂ ಅಲೈಕುಂ ದೋಸ್ತೋ ಎಂದು ಕಾರ್ಲ್ ರಾಕ್ ವಿಡಿಯೋವನ್ನ ಆರಂಭಿಸಿದ್ದಾರೆ. ತನ್ನ ಕುಟುಂಬಸ್ಥರನ್ನ ತುಂಬಾನೇ ಮಿಸ್ ಮಾಡಿಕೊಳ್ತಿದ್ದು ಅವರಿಗಾಗಿ ಈ ವಿಡಿಯೋ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕಾರ್ಲ್ ರಾಕ್ ಹರಿಯಾಣ ಮೂಲದ ಮನಿಷಾ ಮಲಿಕ್ರನ್ನ ವಿವಾಹವಾಗಿದ್ದು 2013ರಿಂದ ಭಾರತದಲ್ಲಿ ನೆಲೆಸಿದ್ದಾರೆ.
ರಾಮ ಕುಂದ್ ಮಂದಿರ, ಸಣ್ಣ ಹಳ್ಳಿಯೊಂದರಲ್ಲಿದೆ. ರಾಮ ತನ್ನ ಪತ್ನಿ ಸೀತೆ, ಸಹೋದರ ಲಕ್ಷ್ಮಣನ ಜೊತೆ ವನವಾಸದ ಸಂದರ್ಭದಲ್ಲಿ ಇಲ್ಲಿ ನೆಲ್ಲೆಸಿದ್ದರು ಅನ್ನೋದು ಇಲ್ಲಿನ ನಂಬಿಕೆಯಂತೆ. ಅಲ್ಲದೇ ಪಾಕಿಸ್ತಾನ ಸರ್ಕಾರ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿದೆ ಎಂದು ಕಾರ್ಲ್ ರಾಕ್ ಹೇಳಿದ್ದಾರೆ.