alex Certify BIG NEWS: ದೇಶದಲ್ಲಿ ʼಕೊರೊನಾʼ ಏರಿಕೆಯಾಗಿದ್ದರ ಹಿಂದಿನ ಕಾರಣ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ʼಕೊರೊನಾʼ ಏರಿಕೆಯಾಗಿದ್ದರ ಹಿಂದಿನ ಕಾರಣ ಬಹಿರಂಗ

ವಿವಾಹದಂತಹ ಸೂಪರ್​ ಸ್ಪ್ರೆಡರ್​ ಕಾರ್ಯಕ್ರಮಗಳು ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣವಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದ ವೇಳೆಯಲ್ಲಿ ಜನರು ಅಜಾಗರೂಕತೆ ವಹಿಸಿರೋದೇ ಈಗಿನ ಕೊರೊನಾ ಕೇಸ್​ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಪ್ರಾಥಮಿಕ ಮೌಲ್ಯಮಾಪನದ ಮೂಲಕ ಹೇಳಿದೆ.

ಸೂಪರ್​ ಸ್ಪ್ರೆಡರ್​ನಂತಹ ಕಾರ್ಯಕ್ರಮಗಳನ್ನ ನೋಡುತ್ತಿದ್ದರೆ ಜನರ ಅಜಾಗರೂಕತೆ ಎದ್ದು ತೋರುತ್ತಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುತ್ತಿದ್ದಾರೆ. ಆದರೆ ಈ ರೀತಿಯ ಜನಸಂದಣಿಯನ್ನ ನಾವು ಕಡಿಮೆ ಮಾಡಲೇಬೇಕಿದೆ. ಎಂದು ನೀತಿ ಆಯೋಗ್ಯದ ಆರೋಗ್ಯ ಇಲಾಖೆ ಸದಸ್ಯ ಡಾ. ವಿ.ಕೆ. ಪಾಲ್​ ಹೇಳಿದ್ದಾರೆ.

BIG NEWS: ಕೊರೊನಾ ಅಟ್ಟಹಾಸ – ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ಭಾರತದಲ್ಲಿ ಶುಕ್ರವಾರ 40 ಸಾವಿರ ಹೊಸ ಕೊರೊನಾ ಕೇಸ್ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,15,14,331ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಾವು ಈಗ ಕೊರೊನಾ ಎರಡನೇ ಅಲೆಯ ಮಧ್ಯ ಸ್ಥಿತಿಯಲ್ಲಿ ಇದ್ದೇವೆ.‌ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹೋದಲ್ಲಿ ಇನ್ನೊಂದು 6 ರಿಂದ 8 ದಿನಗಳಲ್ಲಿ 1,00,000 ಹೊಸ ಕೇಸ್​ಗಳು ದಾಖಲಾಗೋದು ಪಕ್ಕಾ ಎಂದು ಡಾ. ಎನ್​.ಕೆ. ಅರೋರಾ ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...