alex Certify ಅತಿ ಉದ್ದದ ಮೂಗಿನಿಂದ ಸುದ್ದಿ ಮಾಡಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಉದ್ದದ ಮೂಗಿನಿಂದ ಸುದ್ದಿ ಮಾಡಿದ ಶ್ವಾನ

ತನ್ನ ಅತಿಯಾದ ಉದ್ದದ ಮೂತಿಯಿಂದಾಗಿ ನಾಯಿಯೊಂದು ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ವರ್ಜಿನಿಯಾದ ಬೋರ್ಜಾಯ್ ತಳಿಯ ನಾಯಿಯೊಂದು 12 ಇಂಚು ಅಳತೆಯ ಮೂತಿ ಹೊಂದಿದೆ. ಅದರ ಮಾಲೀಕರಾದ ಲೀಲಿ ಕಾಂಬೌರಿನಾ ತಾವು ಮರಿಯನ್ನು ತಂದಾಗ ಮೇಡಂ ಎರಿಸ್ ಓವರ್ ಬೈಟ್, ಸ್ನೂಟ್ ರಾಣಿ ಎಂದು ಹೆಸರಿಟ್ಟಿದ್ದರಂತೆ.

ಇನ್ಸ್ಟಾಗ್ರಾಮ್ ನಲ್ಲಿ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಿಸ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ನಾಯಿಗಳಲ್ಲಿ ಒಂದಾಗಿದೆ. ಇದರ ಫೋಟೋ ನಿಯಮಿತವಾಗಿ ಇನ್ಸ್ಟಾ, ಫೇಸ್ ಬುಕ್ ನಲ್ಲಿ ಪ್ರಕಟಗೊಳ್ಳುತ್ತದೆ. ಇದನ್ನು ಕಂಡ ಜನ‌ರು ಉದ್ದನೆಯ‌ ಮೂಗಿನ‌ ಬಗ್ಗೆ ವಿಸ್ಮಯ ವ್ಯಕ್ತಪಡಿಸುತ್ತಾರೆ.

ನಾಯಿಯನ್ನು ಮನೆಗೆ ತಂದಾಗ ಹಲ್ಲಿನ ಸಮಸ್ಯೆ ಇತ್ತು. ಇದನ್ನು ಹೊರತುಪಡಿಸಿದಂತೆ ಉದ್ದನೆಯ ಮೂತಿಯಿಂದ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂಬುದು ನಾಯಿ ಮಾಲೀಕರ ಅಭಿಪ್ರಾಯ.

ನಾವು ವಾಕಿಂಗ್ ಹೋಗುವಾಗ ಅನೇಕ ಬಾರಿ ರಸ್ತೆಯಲ್ಲಿ ನಿಲ್ಲಬೇಕಾಗುತ್ತದೆ ಏಕೆಂದರೆ ಇದು ಯಾವ ತಳಿಯ ನಾಯಿ ಎಂದು ಜನತೆ ಪ್ರಶ್ನಿಸುತ್ತಾರೆ ಎಂದು ಲಿಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...