alex Certify ಬಾಡಿಗೆಗಿದೆ ರಾಣಿ ಎಲೆಜಬೆತ್​ಗೆ ಸೇರಿದ ಭವ್ಯ ಬಂಗಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆಗಿದೆ ರಾಣಿ ಎಲೆಜಬೆತ್​ಗೆ ಸೇರಿದ ಭವ್ಯ ಬಂಗಲೆ…!

ಯುನೈಟೆಡ್​ ಕಿಂಗ್​ಡಮ್​ನ ರಾಣಿ ಎಲೆಜಬೆತ್,​​ ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಭವ್ಯವಾದ ಆಸ್ತಿಗೆ ಬಾಡಿಗೆದಾರರನ್ನ ಹುಡುಕುತ್ತಿದ್ದಾರೆ. ಆದರೆ ಬಾಡಿಗೆದಾರರು ಯಾವುದೇ ಕಾರಣಕ್ಕೂ ಬೆಕ್ಕನ್ನ ತರಬಾರದು ಅಂತ ಷರತ್ತು ವಿಧಿಸಲಾಗಿದೆ.

ನಾರ್ಫೋಕ್​​ನ 20 ಸಾವಿರ ಎಕರೆ ಸ್ಯಾಂಡ್ರಿಂಗ್ಹ್ಯಾಮ್​​ ಎಸ್ಟೇಟ್​​ನಲ್ಲಿರುವ 6 ಬೆಡ್​​ ರೂಮ್​​ಗಳ ಭವ್ಯವಾದ ಮನೆಯು 2021ರ ವಸಂತ ಕಾಲದಿಂದ ಲಭ್ಯವಿದೆ. ಈ ಭವ್ಯ ಮನೆಯ ಬಾಡಿಗೆ ತಿಂಗಳಿಗೆ 3750 ಪೌಂಡ್​ (3,60,369.45 ರೂಪಾಯಿ) ಅಂತಾ ಹೇಳಲಾಗಿದೆ.

ಈ ಬಂಗಲೆಯಲ್ಲಿ ಸಾಕಲಾಗುತ್ತಿದ್ದ ಪಕ್ಷಿಗಳನ್ನ ಬೆಕ್ಕುಗಳು ಕೊಂದ ಬಳಿಕ 2016ರಿಂದ ಬೆಕ್ಕುಗಳಿಗೆ ಈ ಮನೆಯ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಂತ ಇಲ್ಲಿ ಶ್ವಾನಗಳನ್ನ ಸಾಕಲು ಯಾವುದೇ ತಡೆಯಿಲ್ಲ.

ಭವ್ಯವಾದ ಆಸ್ತಿಯಲ್ಲಿ ವಿಶಾಲವಾದ ಈಜುಕೊಳ, ಟೆನ್ನಿಸ್​ ಕೋರ್ಟ್ ಇದೆ. ಮನೆಯಲ್ಲಿ ಸ್ವಾಗತ ಮಂಟಪ, ಮೂರು ಸ್ವಾಗತ ಕೊಠಡಿಗಳು, ವಿಶಾಲವಾದ ಅಡುಗೆ ಮನೆ ಹಾಗೂ ಉಪಹಾರ ಕೊಠಡಿ ಇದೆ. ಬಾಡಿಗೆದಾರರು ಮೂರು ವರ್ಷಗಳ ಬಾಂಡ್​ಗೆ ಸಹಿ ಹಾಕಬೇಕಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...