ಯುನೈಟೆಡ್ ಕಿಂಗ್ಡಮ್ನ ರಾಣಿ ಎಲೆಜಬೆತ್, ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಭವ್ಯವಾದ ಆಸ್ತಿಗೆ ಬಾಡಿಗೆದಾರರನ್ನ ಹುಡುಕುತ್ತಿದ್ದಾರೆ. ಆದರೆ ಬಾಡಿಗೆದಾರರು ಯಾವುದೇ ಕಾರಣಕ್ಕೂ ಬೆಕ್ಕನ್ನ ತರಬಾರದು ಅಂತ ಷರತ್ತು ವಿಧಿಸಲಾಗಿದೆ.
ನಾರ್ಫೋಕ್ನ 20 ಸಾವಿರ ಎಕರೆ ಸ್ಯಾಂಡ್ರಿಂಗ್ಹ್ಯಾಮ್ ಎಸ್ಟೇಟ್ನಲ್ಲಿರುವ 6 ಬೆಡ್ ರೂಮ್ಗಳ ಭವ್ಯವಾದ ಮನೆಯು 2021ರ ವಸಂತ ಕಾಲದಿಂದ ಲಭ್ಯವಿದೆ. ಈ ಭವ್ಯ ಮನೆಯ ಬಾಡಿಗೆ ತಿಂಗಳಿಗೆ 3750 ಪೌಂಡ್ (3,60,369.45 ರೂಪಾಯಿ) ಅಂತಾ ಹೇಳಲಾಗಿದೆ.
ಈ ಬಂಗಲೆಯಲ್ಲಿ ಸಾಕಲಾಗುತ್ತಿದ್ದ ಪಕ್ಷಿಗಳನ್ನ ಬೆಕ್ಕುಗಳು ಕೊಂದ ಬಳಿಕ 2016ರಿಂದ ಬೆಕ್ಕುಗಳಿಗೆ ಈ ಮನೆಯ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಂತ ಇಲ್ಲಿ ಶ್ವಾನಗಳನ್ನ ಸಾಕಲು ಯಾವುದೇ ತಡೆಯಿಲ್ಲ.
ಭವ್ಯವಾದ ಆಸ್ತಿಯಲ್ಲಿ ವಿಶಾಲವಾದ ಈಜುಕೊಳ, ಟೆನ್ನಿಸ್ ಕೋರ್ಟ್ ಇದೆ. ಮನೆಯಲ್ಲಿ ಸ್ವಾಗತ ಮಂಟಪ, ಮೂರು ಸ್ವಾಗತ ಕೊಠಡಿಗಳು, ವಿಶಾಲವಾದ ಅಡುಗೆ ಮನೆ ಹಾಗೂ ಉಪಹಾರ ಕೊಠಡಿ ಇದೆ. ಬಾಡಿಗೆದಾರರು ಮೂರು ವರ್ಷಗಳ ಬಾಂಡ್ಗೆ ಸಹಿ ಹಾಕಬೇಕಾಗುತ್ತೆ.