ಟಿವಿ ನೇರ ಪ್ರಸಾರದಲ್ಲಿ ಇರುವಾಗಲೇ ನಾಯಿಮರಿಯೊಂದು ವರದಿಗಾರನ ಬಳಿ ಓಡಿ ಬಂದ ಹೃದಯ ಸ್ಪರ್ಶಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫಾಕ್ಸ್ ಫೈವ್ ವರದಿಗಾರನಾದ ಬಾಬ್ ಬರ್ನಾಡ್ ಎಂಬವರು ಹವಾಮಾನದ ವರದಿ ನೀಡುತ್ತಿದ್ದ ವೇಳೆ ನಾಯಿ ಮರಿಯೊಂದು ಇವರ ಬಳಿ ಓಡಿ ಬಂದಿದೆ. ಕಳೆದ ಶುಕ್ರವಾರ ನಡೆದ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೆಟ್ ಮಾಡಿದೆ.
ವರ್ಜಿನಿಯಾದ ಹಿಮಪಾತದ ಬಗ್ಗೆ ಬರ್ನಾಡ್ ವರದಿ ನೀಡುತ್ತಿದ್ದರು. ಕೂಡಲೇ ಅಲ್ಲಿಗೆ ನಾಯಿ ಮರಿ ಓಡಿ ಬಂದಿದ್ದು ವರದಿಗಾರ ಬರ್ನಾಡ್ ಅದನ್ನ ಪ್ರೀತಿಯಿಂದ ಎತ್ತಿಕೊಂಡಿದ್ದಾರೆ. ನಾಯಿ ಮರ ಆತನ ಮುಖವನ್ನ ನೆಕ್ಕುವ ಮೂಲಕ ಪ್ರೀತಿ ಮಾಡಿದ್ರೆ, ಬರ್ನಾಡ್, ನಾವು ಮೊದಲು ಮಾತನಾಡಿದ ಜನರನ್ನ ಮರೆತು ಬಿಡಿ..! ನಾನು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವೆ ಎಂದು ಹೇಳಿದ್ದಾರೆ.