alex Certify ನ್ಯಾಯಾಲಯದ ಮುಂದೆ ವ್ಯಾಯಾಮ ಮಾಡಿ ಪ್ರತಿಭಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಯಾಲಯದ ಮುಂದೆ ವ್ಯಾಯಾಮ ಮಾಡಿ ಪ್ರತಿಭಟನೆ…!

ಕೊರೋನಾ ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಒಬ್ಬೊಬ್ಬರಿಗೆ ಒಂದೊಂದು ಚಿಂತೆಯಾಗಿದೆ. ಕೆಲವರು ಉದ್ಯೋಗ ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ ಮತ್ತೆ ಕೆಲವರು ತಮ್ಮ ವ್ಯಾಪಾರ ವಹಿವಾಟು ಆರಂಭಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ಈ ನಡುವೆ ಅಮೆರಿಕದಲ್ಲಿ ನ್ಯಾಯಾಲಯದ ಹೊರಗೆ ವಿಚಿತ್ರ ಪ್ರತಿಭಟನೆಯೊಂದು ನಡೆಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ನಿಂತು ವ್ಯಾಯಾಮಗಳನ್ನು ಮಾಡಿದರು.

ಸಾಂಕ್ರಾಮಿಕ ರೋಗ ಹರಡಬಾರದು ಎಂಬ ಕಾರಣಕ್ಕೆ ಅಮೆರಿಕದಲ್ಲಿ ಸಹ ಜಿಮ್ನಾಷಿಯಂ ಮತ್ತು ಫಿಟ್ನೆಸ್ ಕೇಂದ್ರಗಳನ್ನು ಮುಚ್ಚಲಾಗಿದೆ.

ಹಲವು ವಾರ ಕಳೆದರೂ ಫಿಟ್ನೆಸ್ ಕೇಂದ್ರ ತೆರೆಯದ್ದರಿಂದ ತಾಳ್ಮೆ ಕಳೆದುಕೊಂಡ ಫಿಟ್ನೆಸ್ ಉತ್ಸಾಹಿಗಳು ಬೀದಿಗಿಳಿದಿದ್ದಾರೆ. ತಕ್ಷಣವೇ ಫಿಟ್ನೆಸ್ ಕೇಂದ್ರ ತೆರೆಯುವಂತೆ ಬ್ಯಾನರ್, ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.  ಫ್ಲೋರಿಡಾದ ಕ್ಲಿಯರ್ ವಾಟರ್ ನಲ್ಲಿನ ನ್ಯಾಯಾಲಯದ ಹೊರಗೆ ಈ ಪ್ರಸಂಗ ನಡೆಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...