alex Certify ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲೇ ಕರುವಿಗೆ ಜನ್ಮ ನೀಡಿದ ಹಸು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲೇ ಕರುವಿಗೆ ಜನ್ಮ ನೀಡಿದ ಹಸು..!

ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿಯೇ ಹಸುವೊಂದು ಕರುವಿಗೆ ಜನ್ಮ ನೀಡಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 32 ವರ್ಷದ ಜೆಸ್ಸಾ ಲಾವ್ಸ್ ಹಾಗೂ 38 ವರ್ಷದ ಬೆಲ್​ ಲಾವ್ಸ್​ರ ಮದುವೆ ಕಾರ್ಯಕ್ರಮದ ನಡೆಯುತ್ತಿರುವಾಗಲೇ ಹಸು ಕರುವಿಗೆ ಜನ್ಮ ನೀಡಿದೆ. 100ಕ್ಕೂ ಹೆಚ್ಚು ಅತಿಥಿಗಳ ನಡುವೆಯೇ ಹಸು ಕರುವಿಗೆ ಜನ್ಮ ನೀಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಜೆಸ್ಸಾ, ಈ ಘಟನೆಯಿಂದಾಗಿ ನನ್ನ ಗೌನ್​ ಸಂಪೂರ್ಣವಾಗಿ ಹಾಳಾಗಿತ್ತು. ಆದರೂ ಇದೊಂದು ಮರೆಯಲಾಗದ ಅನುಭವವಾಗಿದೆ ಎಂದು ಹೇಳಿದ್ದಾರೆ.

ಹೆರಿಗೆ ಬಳಿಕ ತಾಯಿ, ಕರು ಕ್ಷೇಮವಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಜನಿಸಿದ ಕರುವಿಗೆ ಡೆಸ್ಟಿನಿ ಎಂದು ಹೆಸರಿಡಲಾಗಿದೆ.

ವಿಶೇಷ ಅಂದರೆ ಮೂರು ವರ್ಷಗಳ ಹಿಂದೆ ಭೇಟಿಯಾಗಿದ್ದ ಈ ಜೋಡಿ ಹಸುವಿನ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರಂತೆ. ಜೆಸ್ಸಿಯ ಮದುವೆ ಡ್ರೆಸ್​ನ್ನು ಡ್ರೈವಾಶ್​ಗೆ ನೀಡಲಾಗಿದ್ದು ಅದರ ಮೇಲಿರುವ ಕಲೆಯೆಲ್ಲಾ ಸರಿಯಾಗಲಿದೆ ಎಂದು ನಂಬಲಾಗಿದೆ. ಆದರೆ ಜೆಸ್ಸಿ ನನಗೆ ಅಚ್ಚುಕಟ್ಟಾದ ಗೌನ್​ಗಿಂತ ನೆನಪುಗಳನ್ನ ತುಂಬಿರುವ ಈ ಗೌನ್​ ಹೇಗಿದ್ದರೂ ಇಷ್ಟ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...