
ಇನ್ನು ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿದ್ಯುತ್ ಇಲಾಖೆ ಸಚಿವ ಓಮರ್ ಅಯುಬ್ ಖಾನ್, ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಸುಮಾರು 18 ಗಂಟೆಗಳ ಕಾಲ ಪವರ್ ಕಟ್ ಆಗಿದೆ. ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ. ವಿದ್ಯುತ್ ಸ್ಥಾವರದ ದೋಷದಿಂದಾಗಿ ಈ ಕ್ರಮ ಕೈಗೊಳ್ಳೋದು ಅನಿವಾರ್ಯವಾಯ್ತು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಜನತೆ ಕರೆಂಟ್ ಇಲ್ಲದೇ ಕಂಗೆಟ್ಟಿದ್ದರೆ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಈ ವಿಚಾರವನ್ನೇ ಮುಂದಿಟ್ಟುಕೊಂಡು ಟ್ರೋಲ್ ಮೇಲೆ ಟ್ರೋಲ್ ಮಾಡಲಾಗಿದೆ. ಅನೇಕರು ಪಾಕಿಸ್ತಾನ ರೀ ಸ್ಟಾರ್ಟ್ ಆಗ್ತಿದೆ ಅಂತಾ ಲೇವಡಿ ಮಾಡಿದ್ರೆ ಇನ್ನೂ ಹಲವರು ಪಾಕ್ನಲ್ಲಿ ನೈಟ್ ಮೋಡ್ ಆನ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
https://twitter.com/khabasatNaKar/status/1348019928599842817