ಪೋರ್ಚುಗಲ್ನಲ್ಲಿ ಫೈಜರ್ ಲಸಿಕೆ ಪಡೆದಿದ್ದ ನರ್ಸ್ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮೃತ ನರ್ಸ್ನ್ನು 41 ವರ್ಷದ ಸೋನಿಯಾ ಅಜೆವೆಡೋ ಎಂದು ಗುರುತಿಸಲಾಗಿದೆ.
ಈಕೆ ಪೋರ್ಟೋದಲ್ಲಿರುವ ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯಲ್ಲಿ ಮಕ್ಕಳ ವಿಭಾಗದ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಫೈಜರ್ ಬಯೋಟೆಕ್ ಅಭಿವೃದ್ಧಿ ಪಡೆಸಿದ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ ಕೇವಲ 2 ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಬಳಿಕ ತುರ್ತು ಅನುಮೋದನೆಗೊಳಪಟ್ಟಿರುವ ಕೊರೊನಾ ಲಸಿಕೆಗಳ ಬಗ್ಗೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ.