ಕೆಲ ಸಮಯದ ಹಿಂದಷ್ಟೇ ಪಾದಚಾರಿ ತೂಗು ಸೇತುವೆಯನ್ನ ಪೋರ್ಚುಗಲ್ನಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬ್ರಿಡ್ಜ್ ಇದೀಗ ವಿಶ್ವದ ಅತ್ಯಂತ ಉದ್ದದ ಪಾದಚಾರಿ ತೂಗು ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದೆ.
516 ಅರೌಕಾ ಸೇತುವೆಯು 516 ಮೀಟರ್ ಉದ್ದ ಹಾಗೂ ನದಿ ನೀರಿನಿಂದ 175 ಮೀಟರ್ ಎತ್ತರದಲ್ಲಿದೆ. ಈ ಸೇತುವೆಯು ಯುನೆಸ್ಕೋ ಗ್ಲೋಬಲ್ ಜಿಯೋಪಾರ್ಕ್ನಲ್ಲಿದೆ. ಇದು ಜಿಯೋಪಾರ್ಕ್ನ ಎರಡು ತಾಣಗಳಾದ ಅಗುಯಿರಿಸ್ ಜಲಪಾತ ಹಾಗೂ ಪೈವಾ ಜಾರ್ಜ್ನ್ನು ಸಂಪರ್ಕಿಸುತ್ತದೆ.
ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್
ಲಿಸ್ಬನ್ನಿಂದ ಉತ್ತರದಲ್ಲಿ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಈ ಸೇತುವೆಯು ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ಅಂದ ಹಾಗೆ 6 ವರ್ಷದ ಒಳಗಿನ ಮಕ್ಕಳಿಗೆ ಸೇತುವೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಅರೌಕಾ ಸೇತುವೆಗೆ ವಿ ಆಕಾರದ ಸಿಮೆಂಟ್ ಟವರ್ಗಳಿಂದ ಆಧಾರ ನೀಡಲಾಗಿದೆ. ಇದನ್ನು ಮೆಟಲ್ ಗ್ರಿಲ್ಗಳಿಂದ ನಿರ್ಮಾಣ ಮಾಡಲಾಗಿದೆ. 2017ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆದರೆ ಬಳಿಕ ಭೌಗೋಳಿಕ ಸಮಸ್ಯೆಯಿಂದಾಗಿ ಸ್ಥಳ ಬದಲಾವಣೆಗೆ ಒತ್ತಡ ಹೇರಲಾಗಿತ್ತು.