ಪೋರ್ಟ್ಲ್ಯಾಂಡ್ ನ ಹೆಸರಾಂತ ಸೂಪರ್ ಮಾರ್ಕೆಟ್ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್ ಬ್ಲೇಡ್ ಪತ್ತೆಯಾಗಿದೆ. ಈ ಸಂಬಂಧ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಪೋರ್ಟ್ಲ್ಯಾಂಡ್ ನ ಪೈ ಬ್ರ್ಯಾಂಡ್ ಉತ್ತಮ ಪಿಜ್ಜಾ ತಯಾರಿಕೆ ಉತ್ಪನ್ನಗಳನ್ನ ಪೂರೈಸುತ್ತೆ. ಹೀಗಾಗಿ ಇದೇ ಬ್ರ್ಯಾಂಡ್ನ ಪಿಜ್ಜಾ ತಯಾರಿಕಾ ಹಿಟ್ಟನ್ನ ಗ್ರಾಹಕನೊಬ್ಬ ಖರೀದಿ ಮಾಡಿದ್ದಾನೆ. ಆದರೆ ಮನೆಗೆ ಹೋಗಿ ನೋಡಿದ ವೇಳೆ ಈ ಮಿಶ್ರಣದಲ್ಲಿ ರೇಜರ್ ಬ್ಲೇಡ್ ಕಂಡುಬಂದಿದ್ದು ಕೂಡಲೇ ಗ್ರಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪಿಜ್ಜಾ ಉತ್ಪನ್ನಗಳ ತಯಾರಿಕಾ ಘಟಕದ ಮಾಜಿ ಉದ್ಯೋಗಿಯನ್ನ ಬಂಧಿಸಿದ್ದಾರೆ . ಅಲ್ಲದೇ ಆಗಸ್ಟ್ ಹಾಗೂ ಅಕ್ಟೋಬರ್ 11ರವರೆಗೆ ನ್ಯೂಯಾರ್ಕ್, ವರ್ಮೋಂಟ್, ಹ್ಯಾಂಪ್ ಶೈರ್ ಸೇರಿದಂತೆ 184 ಮಳಿಗೆಗಳಲ್ಲಿ ಮಾರಾಟವಾದ ಉತ್ಪನ್ನಗಳನ್ನ ವಾಪಾಸ್ ಪಡೆಯಲಾಗಿದೆ.