alex Certify ಅದೃಷ್ಟ ಅಂದ್ರೆ ಇದಪ್ಪಾ….! ಅಡುಗೆ ಮಾಡಲೆಂದು ತಂದ ಮಾಂಸದಲ್ಲಿ ಬಡ ಮಹಿಳೆಗೆ ಸಿಗ್ತು ಕೋಟಿ ಮೌಲ್ಯದ ʼಮುತ್ತುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪಾ….! ಅಡುಗೆ ಮಾಡಲೆಂದು ತಂದ ಮಾಂಸದಲ್ಲಿ ಬಡ ಮಹಿಳೆಗೆ ಸಿಗ್ತು ಕೋಟಿ ಮೌಲ್ಯದ ʼಮುತ್ತುʼ

ಥೈಲ್ಯಾಂಡ್​​ನ ಬಡ ಮಹಿಳೆಯೊಬ್ಬರು ಕೇಸರಿ ಬಣ್ಣದ ಬೆಲೆ ಬಾಳುವ ಮುತ್ತನ್ನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಕೇವಲ 163 ರೂಪಾಯಿ ವ್ಯಯಿಸಿ ಸಮುದ್ರ ಬಸವನಹುಳುವನ್ನ ಖರೀದಿ ಮಾಡಿದ್ರು. ಇದರಲ್ಲಿ ಖಾದ್ಯ ತಯಾರಿಸಿ ತಿನ್ನುತ್ತಿದ್ದ ವೇಳೆ ಈ ಮುತ್ತು ಲಭಿಸಿದೆ.

ಆ ಸಮುದ್ರ ಜೀವಿಯನ್ನ ಸಣ್ಣದಾಗಿ ಕತ್ತರಿಸುತ್ತಿದ್ದ ವೇಳೆ ಅದರಲ್ಲಿ ಕೇಸರಿ ಬಣ್ಣದ ಮುತ್ತನ್ನ ಕಂಡಿದ್ದಾರೆ. ಮೊದಲಿಗೆ ಮಹಿಳೆ ಅದು ಕಲ್ಲಿರಬಹುದೆಂದು ಭಾವಿಸಿದ್ದರು. ಆದರೆ ಪರಿಶೀಲನೆಯ ಬಳಿಕ ಇದು 6 ಗ್ರಾಂ ತೂಕದ ಮೆಲೋ ಮುತ್ತು ಎಂದು ತಿಳಿದಿದೆ.

ಈ ಮುತ್ತು 1.5 ಸೆಂಟಿಮೀಟರ್​ ವ್ಯಾಸ ಹೊಂದಿದೆ. ತಾಯಿಯ ಚಿಕಿತ್ಸೆಯ ಖರ್ಚನ್ನ ಭರಿಸುವ ಸಲುವಾಗಿ ಕೊಡ್ಚಕೊರ್ನ್​ ಈ ಮುತ್ತನ್ನ ಮಾರುವ ನಿರ್ಧಾರಕ್ಕೆ ಬಂದಿದ್ದಾರೆ.

ನಾನು ಈ ಮುತ್ತನ್ನ ನನ್ನ ತಾಯಿಗೆ ತೋರಿಸಿದೆ. ಆಕೆ ನನಗೆ ಇದು ಬೆಲೆ ಬಾಳುವ ಮುತ್ತು ಎಂದು ಹೇಳಿದ್ರು. ಅಲ್ಲದೇ ವಾರ್ತೆಗಳಲ್ಲಿ ಮೀನುಗಾರರಿಗೆ ಇಂತಹ ಮುತ್ತುಗಳು ಸಿಗುವ ವರದಿಯನ್ನ ನಾನು ನೋಡಿದ್ದೆ ಎಂದು ಮಹಿಳೆ ಕೊಡ್ಚಕೊರ್ನ್​ ಹೇಳಿದ್ದಾರೆ.

ಕೊಡ್ಚಕೊರ್ನ್​ ತಾಯಿ ಕ್ಯಾನ್ಸರ್​​​ನಿಂದ ಬಳಲುತ್ತಿದ್ದು ಅಪಘಾತದಿಂದಲೂ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಈ ಕುಟುಂಬ ಚಿಕಿತ್ಸೆಗಾಗಿ ಮುತ್ತು ಮಾರಾಟದ ಹಣವನ್ನ ವ್ಯಯಿಸೋಕೆ ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...