alex Certify ಆಟಿಕೆ ಮಾದರಿಯ ಅಸಲಿ ಗನ್​ ತಯಾರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದವ ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಕೆ ಮಾದರಿಯ ಅಸಲಿ ಗನ್​ ತಯಾರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದವ ಅಂದರ್​..!

ಇಡಾಹೋ ಪೊಲೀಸರು ಥೇಟ್​​ ಆಟಿಕೆ ಗನ್​ನಂತೆಯೇ ಕಾಣುವ ಅಸಲಿ ಪಿಸ್ತೂಲ್​ನ್ನ ವಶಕ್ಕೆ ಪಡೆದಿದ್ದಾರೆ. ಗನ್​ಗಳ ಸೀರಿಯಲ್​ ನಂಬರ್​​ ಪರಿಶೀಲನೆ ಮಾಡುತ್ತಿದ್ದ ವೇಳೆ ಒಂದು ಗನ್​ ಸೆಪ್ಟೆಂಬರ್​ ತಿಂಗಳಲ್ಲಿ ಕಾಣೆಯಾದ ವಿಚಾರ ಬೆಳಕಿಗೆ ಬಂದಿದೆ.

ಡಿಸೆಂಬರ್​ 24ರಂದು ಇಬ್ಬರು ವ್ಯಕ್ತಿಗಳು ಪಾರ್ಕಿಂಗ್​ ಸ್ಥಳದಲ್ಲಿ ಕುಳಿತು ಕಾನೂನು ಬಾಹಿರವಾಗಿ ಮಾದಕ ದ್ರವ್ಯ ಸೇವನೆ ಮಾಡ್ತಿದ್ದ ಬಗ್ಗೆ ಮಾಹಿತಿ ಪಡೆದರು. ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟಕ್ಕೆ ತೆರಳಿದ್ದ ವೇಳೆ ಪೊಲೀಸರು ಈ ಗನ್​ನ್ನು ವಶಕ್ಕೆ ಪಡೆದಿದ್ದಾರೆ.

ವಾಹನದೊಳಗೆ ಕುಳಿತಿದ್ದ ಇಬ್ಬರು ಮಾದಕ ದ್ರವ್ಯ ವ್ಯಸನಿಗಳನ್ನ ಕಾರ್ಲಿ ಕುಕ್​ ಹಾಗೂ ಸೈಮನ್​ ಮಾರ್ಟಿನೆಜ್​ ಎಂದು ಗುರುತಿಸಲಾಗಿದೆ. ಇವರಿಬ್ಬರ ಬಂಧನಕ್ಕೆ ತೆರಳಿದ್ದ ಮಾರ್ಟಿನೆಟ್​​ನ ಪರ್ಸ್​ನಲ್ಲಿ ಈ ಗನ್​ ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮಾದಕ ದ್ರವ್ಯ ಸೇವನೆ ಹಾಗೂ ಅಕ್ರಮ ಗನ್​ ಸಂಗ್ರಹ ಆರೋಪದಡಿಯಲ್ಲಿ ಮಾರ್ಟಿನೆಜ್​ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನ ಬೊನ್ನೆವಿಲ್ಲೆ ಕೌಂಟಿ ಜೈಲಿನಲ್ಲಿ ಇಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...