ಇಡಾಹೋ ಪೊಲೀಸರು ಥೇಟ್ ಆಟಿಕೆ ಗನ್ನಂತೆಯೇ ಕಾಣುವ ಅಸಲಿ ಪಿಸ್ತೂಲ್ನ್ನ ವಶಕ್ಕೆ ಪಡೆದಿದ್ದಾರೆ. ಗನ್ಗಳ ಸೀರಿಯಲ್ ನಂಬರ್ ಪರಿಶೀಲನೆ ಮಾಡುತ್ತಿದ್ದ ವೇಳೆ ಒಂದು ಗನ್ ಸೆಪ್ಟೆಂಬರ್ ತಿಂಗಳಲ್ಲಿ ಕಾಣೆಯಾದ ವಿಚಾರ ಬೆಳಕಿಗೆ ಬಂದಿದೆ.
ಡಿಸೆಂಬರ್ 24ರಂದು ಇಬ್ಬರು ವ್ಯಕ್ತಿಗಳು ಪಾರ್ಕಿಂಗ್ ಸ್ಥಳದಲ್ಲಿ ಕುಳಿತು ಕಾನೂನು ಬಾಹಿರವಾಗಿ ಮಾದಕ ದ್ರವ್ಯ ಸೇವನೆ ಮಾಡ್ತಿದ್ದ ಬಗ್ಗೆ ಮಾಹಿತಿ ಪಡೆದರು. ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟಕ್ಕೆ ತೆರಳಿದ್ದ ವೇಳೆ ಪೊಲೀಸರು ಈ ಗನ್ನ್ನು ವಶಕ್ಕೆ ಪಡೆದಿದ್ದಾರೆ.
ವಾಹನದೊಳಗೆ ಕುಳಿತಿದ್ದ ಇಬ್ಬರು ಮಾದಕ ದ್ರವ್ಯ ವ್ಯಸನಿಗಳನ್ನ ಕಾರ್ಲಿ ಕುಕ್ ಹಾಗೂ ಸೈಮನ್ ಮಾರ್ಟಿನೆಜ್ ಎಂದು ಗುರುತಿಸಲಾಗಿದೆ. ಇವರಿಬ್ಬರ ಬಂಧನಕ್ಕೆ ತೆರಳಿದ್ದ ಮಾರ್ಟಿನೆಟ್ನ ಪರ್ಸ್ನಲ್ಲಿ ಈ ಗನ್ ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮಾದಕ ದ್ರವ್ಯ ಸೇವನೆ ಹಾಗೂ ಅಕ್ರಮ ಗನ್ ಸಂಗ್ರಹ ಆರೋಪದಡಿಯಲ್ಲಿ ಮಾರ್ಟಿನೆಜ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನ ಬೊನ್ನೆವಿಲ್ಲೆ ಕೌಂಟಿ ಜೈಲಿನಲ್ಲಿ ಇಡಲಾಗಿದೆ.