ಡಿಸ್ಕವರಿ ಚಾನಲ್ ಗಾಗಿ ಬಿಯರ್ ಗ್ರಿಲ್ಸ್ ನಡೆಸಿಕೊಡುತ್ತಿದ್ದ ಮ್ಯಾನ್ v/s ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಫೋಟೊವೀಗ ಜಾಲತಾಣದಲ್ಲಿ ವೈರಲ್ ಆಗಿದೆ.
2019 ರ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿ ಹಾಗೂ ಬಿಯರ್ ಗ್ರಿಲ್ಸ್ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕಾಡು-ಮೇಡು ಅಲೆಯುತ್ತಾ, ಹರಟುತ್ತಾ, ಮನುಷ್ಯ ಮತ್ತು ಕಾಡು, ಬೆಟ್ಟ, ಗುಡ್ಡ, ನದಿ, ಮರ-ಗಿಡ, ವನ್ಯಪ್ರಾಣಿಗಳ ನಡುವಿನ ಸಂಘರ್ಷ, ಸಾಮ್ಯತೆ, ರಾಜಿ ಸೂತ್ರಗಳ ಬಗ್ಗೆ ಚರ್ಚಿಸಿದ್ದರು.
ರೈತ ಪ್ರತಿಭಟನೆ: ವದಂತಿ ಹಬ್ಬಿಸುವ ಟ್ವಿಟರ್ ಖಾತೆಗಳ ಬ್ಯಾನ್ಗೆ ಐಟಿ ಸಚಿವಾಲಯ ಆದೇಶ
ಈ ಪೋಟೋವನ್ನು ಸ್ವತಃ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಬಿಯರ್ ಗ್ರಿಲ್ಸ್, ಇದನ್ನು ತಮ್ಮ ಅಚ್ಚುಮೆಚ್ಚಿನ ಫೋಟೊಗಳಲ್ಲೊಂದು ಎಂದು ಕರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಚಳಿ, ಮಳೆಗೆ ಮೈಯೊಡ್ಡಿ ನಡುಗುತ್ತಿದ್ದ ಇಬ್ಬರೂ ನದಿ ತೀರದಲ್ಲಿ ಕುಳಿತು, ಚಹಾ ವಿವಿಮಯ ಮಾಡಿಕೊಂಡು ಬೆಚ್ಚಗಾದ ಪ್ರಸಂಗವನ್ನೂ ಹಂಚಿಕೊಂಡಿದ್ದಾರೆ. ಈ ನೆಚ್ಚಿನ ಪೋಟೋ ಹಾಗೂ ಪ್ರಸಂಗಗಳು ತಮ್ಮ ಆತ್ಮಚರಿತ್ರೆ ನೆವರ್ ಗಿವ್ ಅಪ್ ನಲ್ಲಿ ಇರಲಿವೆ ಎಂಬ ಸುಳಿವನ್ನೂ ಕೊಟ್ಟಿದ್ದಾರೆ.
https://www.instagram.com/p/CK6X1EOARvR/?utm_source=ig_web_copy_link