ಮನೆಯಲ್ಲಿ ಗಿಡಗಳನ್ನು ಬೆಳೆಸುವ ಆರೋಗ್ಯಕರ ಹವ್ಯಾಸವನ್ನು ಬೆಳೆಸಿಕೊಂಡಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ 200ಕ್ಕೂ ಹೆಚ್ಚು ರೀತಿಯ ಸಸಿಗಳನ್ನು ಬೆಳೆಸಿದ್ದು, ಇದಕ್ಕೆಂದು $5000 (3.78 ಲಕ್ಷ ರೂ.) ವ್ಯಯಿಸಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಮಾಂಟೆರೆ ಎಂಬಲ್ಲಿರುವ ಸಿರಿಲ್ ಸೊಂಟಿಲ್ಲಾನೋ ಹೆಸರಿನ ಈ ವ್ಯಕ್ತಿ ತಾನು ಮನುಷ್ಯರಿಗಿಂತ ಸಸಿಗಳನ್ನು ಇಷ್ಟ ಪಡುವುದಾಗಿ ತಿಳಿಸಿದ್ದಾರೆ. ಈ ಸಸಿಗಳನ್ನು ತನ್ನ ಮಕ್ಕಳಂತೆ ಸಾಕುತ್ತಿರುವ ಈತ, ಪ್ರತಿನಿತ್ಯ ಅವಕ್ಕೆ ನೀರು/ಗೊಬ್ಬರ ಹಾಕಿ ಬಹಳ ಆಸ್ಥೆಯಿಂದ ಪೋಷಣೆ ಮಾಡುತ್ತಾ ಬಂದಿದ್ದಾರೆ.
ತನ್ನ ಈ ಕೈಂಕರ್ಯದಿಂದ ‘Plant Daddy’ ಎಂಬ ಅನ್ವರ್ಥ ನಾಮ ಪಡೆದುಕೊಂಡಿದ್ದಾರೆ ಸಿರಿಲ್. ತಾನು ಬೆಳೆಸಿದ ಸಸಿಗಳನ್ನು ತನ್ನ ಸ್ನೇಹಿತರಿಗೆ ಫೋಟೋಗಳ ಮೂಲಕ ಶೇರಿಂಗ್ ಮಾಡಿಕೊಂಡು ಖುಷಿ ಪಡುತ್ತಾರೆ ಸಿರಿಲ್.
https://www.instagram.com/p/CB4cH1lnSJC/?utm_source=ig_embed
https://www.instagram.com/p/CA_mOfGHmTH/?utm_source=ig_embed
https://www.instagram.com/p/CAx8liTHxiI/?utm_source=ig_embed
https://www.instagram.com/p/CAZFvMqHvBI/?utm_source=ig_embed