alex Certify ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ.

ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ ಅನಿವಾರ್ಯವಾಗಿ ವಿಮಾನ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ. ಈ ರೀತಿ ವಿಮಾನದಲ್ಲಿ ರಂಪಾಟ ಮಾಡಿರುವ ಯುವತಿಯನ್ನು ಲೀ ಎಂದು ಗುರುತಿಸಲಾಗಿದ್ದು, ಲವ್‌ ಫೇಲ್ಯೂರ್‌ ಆಗಿದ್ದರಿಂದ ನಿಯಂತ್ರಣ ಕಳೆದುಕೊಂಡು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಮೇ 25ರಂದು ನಡೆದಿದ್ದು, ವಿಮಾನ ಗಾಜು ಹೊಡೆದಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅಧಿಕಾರಿಗಳ ಪ್ರಕಾರ, ಚೀನಾದ ಹೆನಾನ್‌ ಪ್ರಾಂತ್ಯದ ರಾಜಧಾನಿ ಝೆನ್‌ಝೂಹುನಲ್ಲಿ ವಿಮಾನವನ್ನು ತುರ್ತು ಲ್ಯಾಂಡ್‌ ಮಾಡಲಾಗಿದೆ.

ಬಳಿಕ ಸ್ಥಳೀಯ ಪೊಲೀಸರು ಯುವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಆಕೆಯ ಬಾಯ್‌ ಫ್ರೆಂಡ್‌ ಕೈಕೊಟ್ಟಿದ್ದರಿಂದ ಬೇಸರಗೊಂಡು ಮದ್ಯ ಸೇವಿಸಿದ್ದಾರೆ. ಇದರಿಂದ ಕಂಟ್ರೋಲ್‌ ತಪ್ಪಿ ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...