alex Certify ಓರ್ವ ಪ್ರಯಾಣಿಕನನ್ನ ಹೊತ್ತು ಬರೋಬ್ಬರಿ 4000 ಕಿ.ಮೀ. ಸಂಚರಿಸಿದೆ ಈ ವಿಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓರ್ವ ಪ್ರಯಾಣಿಕನನ್ನ ಹೊತ್ತು ಬರೋಬ್ಬರಿ 4000 ಕಿ.ಮೀ. ಸಂಚರಿಸಿದೆ ಈ ವಿಮಾನ..!

ಕೇವಲ ಒಂದೇ ಒಂದು ಪ್ರಯಾಣಿಕನನ್ನು ಹೊಂದಿದ್ದ ವಿಮಾನವೊಂದು ಬರೋಬ್ಬರಿ 4 ಸಾವಿರ ಕಿಲೋಮೀಟರ್​ ದೂರ ಪ್ರಯಾಣ ಮಾಡಿದೆ. ಇಸ್ರೇಲ್​ನ ರಾಷ್ಟ್ರೀಯ ಏರ್​ಲೈನ್​​ ಸಂಸ್ಥೆಯು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ರೋಗಿಯನ್ನ ಹೊತ್ತು ತೇವ್​ ಎವಿವ್​ನಿಂದ ಕ್ಯಾಸಬ್ಲಾನ್ಸಾಗೆ ಸಂಚರಿಸಿದೆ.

ಬೋಯಿಂಗ್​ 737 ವಿಮಾನದಲ್ಲಿ 160 ಪ್ರಯಾಣಿಕರಿಗೆ ಆಸೀನದ ವ್ಯವಸ್ಥೆ ಇದೆ. ಆದರೂ ಸಹ ಈ ವಿಮಾನವು ಕೇವಲ ಒಬ್ಬ ವ್ಯಕ್ತಿಯನ್ನ ಹೊತ್ತೊಯ್ದಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ಈ ವಿಮಾನವು 4 ಸಾವಿರ ಕಿಲೋಮೀಟರ್​ ದೂರ ಕ್ರಮಿಸಿದೆ. ಹಿಂತಿರುಗಿ ತನ್ನ ನಿಲ್ದಾಣ ತಲುಪಲು 5 ಗಂಟೆಗಳ ಅವಧಿ ತೆಗೆದುಕೊಂಡಿದೆ.

ಇನ್ನು ಈ ವಿಚಾರವಾಗಿ ಪತ್ರಕರ್ತ ಬ್ಲುಮೆಂಟಲ್​​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಫ್ಲೈಟ್​ನಲ್ಲಿ ಮೊರಕ್ಕೋದಲ್ಲಿ ವಾಸಿಸುತ್ತಿರುವ ಇಸ್ರೇಲಿ ಉದ್ಯಮಿಯನ್ನ ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಗುತ್ತಿದೆ. ರಾತ್ರಿಯೇ ವಿಮಾನವು ಇಸ್ರೇಲ್​ಗೆ ಹಿಂದಿರಗಲಿದೆ ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್​ನಲ್ಲಿ ಅವರು, ಈ ವಿಮಾನಯಾನವನ್ನ ಮಡಾಸಿಸ್​ ಮೆಡಿಕಲ್​ ಫ್ಲೈಟ್​ ಕಂಪನಿ ಆಯೋಜನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ವೈದ್ಯಕೀಯ ಸಾಧನಗಳೂ ಇದ್ದವು. ಅಲ್ಲದೇ ಶುಶ್ರೂಷೆ ಮಾಡುವ ತಂಡ ಕೂಡ ವಿಮಾನದಲ್ಲಿತ್ತು ಎಂದು ಮಾಹಿತಿ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...