ಕೇವಲ ಒಂದೇ ಒಂದು ಪ್ರಯಾಣಿಕನನ್ನು ಹೊಂದಿದ್ದ ವಿಮಾನವೊಂದು ಬರೋಬ್ಬರಿ 4 ಸಾವಿರ ಕಿಲೋಮೀಟರ್ ದೂರ ಪ್ರಯಾಣ ಮಾಡಿದೆ. ಇಸ್ರೇಲ್ನ ರಾಷ್ಟ್ರೀಯ ಏರ್ಲೈನ್ ಸಂಸ್ಥೆಯು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ರೋಗಿಯನ್ನ ಹೊತ್ತು ತೇವ್ ಎವಿವ್ನಿಂದ ಕ್ಯಾಸಬ್ಲಾನ್ಸಾಗೆ ಸಂಚರಿಸಿದೆ.
ಬೋಯಿಂಗ್ 737 ವಿಮಾನದಲ್ಲಿ 160 ಪ್ರಯಾಣಿಕರಿಗೆ ಆಸೀನದ ವ್ಯವಸ್ಥೆ ಇದೆ. ಆದರೂ ಸಹ ಈ ವಿಮಾನವು ಕೇವಲ ಒಬ್ಬ ವ್ಯಕ್ತಿಯನ್ನ ಹೊತ್ತೊಯ್ದಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ಈ ವಿಮಾನವು 4 ಸಾವಿರ ಕಿಲೋಮೀಟರ್ ದೂರ ಕ್ರಮಿಸಿದೆ. ಹಿಂತಿರುಗಿ ತನ್ನ ನಿಲ್ದಾಣ ತಲುಪಲು 5 ಗಂಟೆಗಳ ಅವಧಿ ತೆಗೆದುಕೊಂಡಿದೆ.
ಇನ್ನು ಈ ವಿಚಾರವಾಗಿ ಪತ್ರಕರ್ತ ಬ್ಲುಮೆಂಟಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಫ್ಲೈಟ್ನಲ್ಲಿ ಮೊರಕ್ಕೋದಲ್ಲಿ ವಾಸಿಸುತ್ತಿರುವ ಇಸ್ರೇಲಿ ಉದ್ಯಮಿಯನ್ನ ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಗುತ್ತಿದೆ. ರಾತ್ರಿಯೇ ವಿಮಾನವು ಇಸ್ರೇಲ್ಗೆ ಹಿಂದಿರಗಲಿದೆ ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಅವರು, ಈ ವಿಮಾನಯಾನವನ್ನ ಮಡಾಸಿಸ್ ಮೆಡಿಕಲ್ ಫ್ಲೈಟ್ ಕಂಪನಿ ಆಯೋಜನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ವೈದ್ಯಕೀಯ ಸಾಧನಗಳೂ ಇದ್ದವು. ಅಲ್ಲದೇ ಶುಶ್ರೂಷೆ ಮಾಡುವ ತಂಡ ಕೂಡ ವಿಮಾನದಲ್ಲಿತ್ತು ಎಂದು ಮಾಹಿತಿ ನೀಡಿದ್ದಾರೆ.