alex Certify ಅಚ್ಚರಿಯಾದರೂ ಇದು ನಿಜ: ಲಾಭ ಗಳಿಸಲು ರೆಸ್ಟೋರೆಂಟ್ ಮಾಲೀಕನಿಂದಲೇ ಪಿಜ್ಜಾ ಖರೀದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ನಿಜ: ಲಾಭ ಗಳಿಸಲು ರೆಸ್ಟೋರೆಂಟ್ ಮಾಲೀಕನಿಂದಲೇ ಪಿಜ್ಜಾ ಖರೀದಿ

ನ್ಯೂಯಾರ್ಕ್: ಪಿಜ್ಜಾ ರೆಸ್ಟೋರೆಂಟ್ ಒಂದರ ಮಾಲೀಕ‌ ಅವನದೇ ರೆಸ್ಟೋರೆಂಟ್ ನ ಪಿಜ್ಜಾಗಳನ್ನು ಫುಡ್ ಡಿಲೆವರಿ ಆಪ್ ಮೂಲಕ ಪಡೆದು ಲಾಭ ಗಳಿಸಿದ್ದಾನೆ.

ಹೌದು, ಎಜೆಸ್‌ ಎನ್.ವೈ. ಪಿಜಾರಿಯಾ ಒಂದು ಪಿಜ್ಜಾವನ್ನು 24 ಡಾಲರ್ ಗೆ ಮಾರಾಟ ಮಾಡುತ್ತದೆ. ಆದರೆ, ಅದೇ ರೆಸ್ಟೋರೆಂಟ್ ನ ಪಿಜ್ಜಾದ ಬೆಲೆಯನ್ನು ಡೋರ್ ಡ್ಯಾಷ್ ಎಂಬ ಆಪ್ 16 ಡಾಲರ್ ಎಂದು ತೋರಿಸುತ್ತಿತ್ತು.

ಇದರಿಂದ ಅಚ್ಚರಿಗೊಳಗಾದ ಮಾಲೀಕ ತಮ್ಮ ಸ್ನೇಹಿತರಿಗೋಸ್ಕರ 160 ಡಾಲರ್ ನೀಡಿ ಡೋರ್ ಡ್ಯಾಷ್ ಆಪ್ ಮೂಲಕ 10 ಪಿಜ್ಜಾ ಖರೀದಿಸಿದರು‌. ಆಪ್ ರೆಸ್ಟೋರೆಂಟ್ ಗೆ 240 ಡಾಲರ್ ಪಾವತಿ ಮಾಡಿತ್ತು. ಇನ್ನೊಮ್ಮೆ ಕಡಿಮೆ ಮಸಾಲೆ 10 ಪಿಜ್ಜಾ ಗಳನ್ನು ಆರ್ಡರ್ ಮಾಡಿದ್ದರು‌. ಆಗಲೂ ಆಪ್ ನಷ್ಟ ಮಾಡಿಕೊಂಡು ಮಾರಾಟ ಮಾಡುವ ಹಕೀಕತ್ತು ಏನೆಂದು ಅರ್ಥವಾಗಿರಲಿಲ್ಲ.

ಕೊನೆಗೆ ಅವರು ಆಪ್ ನ ಮಾರುಕಟ್ಟೆ ತಂತ್ರಗಾರಿಕೆಯನ್ನು ಕಂಡು ಹಿಡಿದರು. ಗ್ರಾಹಕರನ್ನು ಸೆಳೆದುಕೊಳ್ಳಲು, ರೆಸ್ಟೋರೆಂಟ್ ಗಳನ್ನು ತನ್ನ ಕೈಯ್ಯಲ್ಲಿ ಇಟ್ಟುಕೊಳ್ಳಲು ಈ ರೀತಿ ಮಾಡುವುದನ್ನು ಕಂಡು ಹಿಡಿದೆ ಎಂದು ರಾಯ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...