ಅಮೆರಿಕದಲ್ಲಿ ಪ್ರಸ್ತುತ ಸಿಕ್ಕಾಪಟ್ಟೆ ಚಳಿಯ ವಾತಾವರಣ ಇದೆ. ಈ ಹವಾಮಾನ ಎಷ್ಟು ತೀವ್ರವಾಗಿದೆ ಅಂದರೆ ನಯಾಗರ ಫಾಲ್ಸ್ ಸಂಪೂರ್ಣ ಮಂಜುಗಡ್ಡೆಯಂತಾಗಿದೆ. ಇದರ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ರೌಂಡ್ ಹಾಕ್ತಿವೆ.
ಸಂಪೂರ್ಣ ಹಿಮದ ಗಡ್ಡೆಯಾಗಿ ರೂಪುಗೊಂಡ ಈ ಜಲಪಾತ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ನಯಾಗರ ಜಲಪಾತ ಒಂಟಾರಿಯೋ ಪ್ರಾಂತ್ಯದ ಗಡಿಯಲ್ಲಿದೆ ಹಾಗೂ ನ್ಯೂಯಾರ್ಕ್ಗೆ ವ್ಯಾಪಿಸಿದೆ. ಇದು ಹಾರ್ಸ್ ಶೂ ಫಾಲ್ಸ್, ಸ್ಮಾಲ್ ಅಮೆರಿಕನ್ ಫಾಲ್ಸ್ ಹಾಗೂ ಬ್ರೈಡಲ್ ವೈಲ್ ಫಾಲ್ಸ್ ಮೂರು ಫಾಲ್ಸ್ ಹೊಂದಿದೆ.
ಪ್ರತಿವರ್ಷ ಜಲಪಾತಗಳ ಸುತ್ತಲೂ ಮಂಜುಗಡ್ಡೆ ರೂಪುಗೊಳ್ಳುತ್ತೆ. 2014 ಹಾಗೂ 2015ರಲ್ಲೂ ಇದೇ ರೀತಿಯ ಚಿತ್ರಣ ಕಂಡು ಬಂದಿತ್ತು.