alex Certify ವಿಶ್ವದ ಅತ್ಯಂತ ದೊಡ್ಡ ಮಂಜುಗಡ್ಡೆ ಪರ್ವತ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ದೊಡ್ಡ ಮಂಜುಗಡ್ಡೆ ಪರ್ವತ ಪತ್ತೆ

ದಕ್ಷಿಣ ಜಾರ್ಜಿಯಾ ಕಡೆ ಸಂಚರಿಸುತ್ತಿದ್ದ ಆರ್​ಎ​ಎಫ್​ ವಿಮಾನದಲ್ಲಿದ್ದ ಸಿಬ್ಬಂದಿ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಪರ್ವತದ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕುಸಿಯುತ್ತಿರುವ ಸ್ಥಿತಿಯಲ್ಲಿದ್ದ ಮಂಜುಗಡ್ಡೆಯ ರಾಶಿಯ ಫೋಟೋವನ್ನ ಎ 400 ಎಂ ವಿಮಾನದ ಸಿಬ್ಬಂದಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಮಂಜುಗಡ್ಡೆ ಪರ್ವತ ಬಿರುಕುಬಿಟ್ಟಿರೋದನ್ನ ಕಾಣಬಹುದಾಗಿದೆ.

ಈ ಮಂಜುಗಟ್ಟೆ 4200 ಚದರ ಕಿಲೋಮೀಟರ್​ ಅಳತೆಯನ್ನ ಹೊಂದಿದೆ. ಇದು ಹೆಚ್ಚು ಕಮ್ಮಿ ನೈಋತ್ಯ ಇಂಗ್ಲೆಂಡ್​ನ ಸೋಮರ್​ಸೆಟ್​ನಷ್ಟು ವಿಸ್ತೀರ್ಣಕ್ಕೆ ಸಮನಾಗಿದೆ ಎನ್ನಲಾಗಿದೆ. ಅಂದಹಾಗೆ ವಿಮಾನಯಾದ ಸಿಬ್ಬಂದಿ ಈ ಮಂಜುಗಡ್ಡೆಯಿಂದ ಬರೋಬ್ಬರಿ 200 ಕಿಲೋಮೀಟರ್​ ದೂರದಲ್ಲಿರೋವಾಗ ಈ ಫೋಟೋಗಳನ್ನ ಸೆರೆಹಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...