ದಕ್ಷಿಣ ಜಾರ್ಜಿಯಾ ಕಡೆ ಸಂಚರಿಸುತ್ತಿದ್ದ ಆರ್ಎಎಫ್ ವಿಮಾನದಲ್ಲಿದ್ದ ಸಿಬ್ಬಂದಿ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಪರ್ವತದ ಫೋಟೋಗಳನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕುಸಿಯುತ್ತಿರುವ ಸ್ಥಿತಿಯಲ್ಲಿದ್ದ ಮಂಜುಗಡ್ಡೆಯ ರಾಶಿಯ ಫೋಟೋವನ್ನ ಎ 400 ಎಂ ವಿಮಾನದ ಸಿಬ್ಬಂದಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಮಂಜುಗಡ್ಡೆ ಪರ್ವತ ಬಿರುಕುಬಿಟ್ಟಿರೋದನ್ನ ಕಾಣಬಹುದಾಗಿದೆ.
ಈ ಮಂಜುಗಟ್ಟೆ 4200 ಚದರ ಕಿಲೋಮೀಟರ್ ಅಳತೆಯನ್ನ ಹೊಂದಿದೆ. ಇದು ಹೆಚ್ಚು ಕಮ್ಮಿ ನೈಋತ್ಯ ಇಂಗ್ಲೆಂಡ್ನ ಸೋಮರ್ಸೆಟ್ನಷ್ಟು ವಿಸ್ತೀರ್ಣಕ್ಕೆ ಸಮನಾಗಿದೆ ಎನ್ನಲಾಗಿದೆ. ಅಂದಹಾಗೆ ವಿಮಾನಯಾದ ಸಿಬ್ಬಂದಿ ಈ ಮಂಜುಗಡ್ಡೆಯಿಂದ ಬರೋಬ್ಬರಿ 200 ಕಿಲೋಮೀಟರ್ ದೂರದಲ್ಲಿರೋವಾಗ ಈ ಫೋಟೋಗಳನ್ನ ಸೆರೆಹಿಡಿದಿದ್ದಾರೆ.